ಇಡೀ ಜಗತ್ತು ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠೆ’ ನೋಡಲು ಕಾಯುತ್ತಿದೆ- ಶಂಕರ್ ಮಹಾದೇವನ್

Public TV
1 Min Read

ಖ್ಯಾತ ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹಾದೇವನ್ (Shankar Mahadevan) ಅವರು ಅಯೋಧ್ಯೆ (Ayodhya) ರಾಮಮಂದಿರದ ಉದ್ಘಾಟನೆಯ ಕುರಿತು ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಈ ಸಂಭ್ರಮದಲ್ಲಿ ಶಂಕರ್ ಮಹಾದೇವನ್ ಕೂಡ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಹಾಡಿನ ಮೂಲಕ ಶ್ರೀರಾಮನನ್ನು ಸ್ಮರಿಸಿದ ಜಗ್ಗೇಶ್

ಈಗಾಗಲೇ ಅಯೋಧ್ಯೆ ತಲುಪಿರುವ ಶಂಕರ್ ಮಹಾದೇವನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದೇಶ ಮಾತ್ರವಲ್ಲದೇ ಇಡೀ ಜಗತ್ತು ಈ ಕ್ಷಣಕ್ಕಾಗಿ ಕಾಯುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ನೋಡಲು ನಾವು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ನಾವು ಕೂಡ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರೋದ್ದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ.

ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯು ಭಾರತದಲ್ಲಿ ನಡೆಯಲಿರುವ ದೊಡ್ಡ ಸಂಭ್ರಮ ಎಂದು ನಾನು ಭಾವಿಸುತ್ತೇನೆ ಎಂದು ಶಂಕರ್ ಮಹಾದೇವನ್ ಮಾತನಾಡಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆಯುತ್ತಿದೆ. ಕನ್ನಡದ ನಟ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬಹುಭಾಷಾ ಕಲಾವಿದರಿಗೂ ಆಹ್ವಾನ ನೀಡಿದ್ದಾರೆ.

Share This Article