ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

Public TV
1 Min Read

ಚಂಢೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಭಾನುವಾರ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಅವರು ಸಾಯುವ ಮುನ್ನ ದೇಸೀ ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ಇದೇ ಜೂನ್‍ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಲಿವುಡ್‍ನ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ತಿಳಿಸಿದ್ದಾರೆ.

 

View this post on Instagram

 

A post shared by Salim Merchant (@salimmerchant)

ಸಿಧು ಅವರ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಅವರು ಮಾತನಾಡಿ, ಸಿಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಗಾಯಕ ತನ್ನ ಹುಟ್ಟುಹಬ್ಬದಂದು ಕೆಲವು ವಿಶೇಷ ಯೋಜನೆಗಳನ್ನು ಹೊಂದಿದ್ದರು. ಜೂನ್ 11 ರಂದು ಸಿಧು ಅವರ ಜನ್ಮದಿನ ಬರುತ್ತದೆ. ಈ ಬಾರಿ ಅವರು 29 ವರ್ಷಕ್ಕೆ ಕಾಲಿಡುತ್ತಿದ್ದರು. ಸದ್ಯದಲ್ಲೇ ಈ ಹಾಡಿನ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಇಂಥದ್ದೊಂದು ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಿಧು ಮೂಸೇವಾಲಾ ಈ ಬಾರಿ ದೇಸೀ ಪಂಜಾಬಿ ಶೈಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

ಸಿಧು ತುಂಬಾ ಪ್ರೀತಿಯಿಂದ ಮಾತನಾಡುವ ಗೌರವಾನ್ವಿತ ವ್ಯಕ್ತಿ. ನಾನು ಟಿಪಿಕಲ್ ಪಂಜಾಬಿ ಹಾಡೊಂದನ್ನು ಕಂಪೋಸ್ ಮಾಡಿದ್ದೆ, ಆ ನಂತರ ಸಿಧು ಮಾತ್ರ ಈ ಹಾಡನ್ನು ಚೆನ್ನಾಗಿ ಹಾಡಬಲ್ಲ ಎಂದು ನನಗೆ ಖಾತ್ರಿಯಾಗಿತ್ತು. ಆದರೆ ದೇವರ ಇಚ್ಛೆಯ ಬೇರೆಯಾಗಿತ್ತು ಎಂದರು. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

ಸಿಧು ಅವರ ಹಾಡು ಇದೇ ಜೂನ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ಈ ಹಾಡನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಸಿಧು ಚುನಾವಣೆಯಲ್ಲಿ ಬ್ಯುಸಿಯಾದರು ಮತ್ತು ಅದರ ಬಿಡುಗಡೆಯು ಸ್ಥಗಿತಗೊಂಡಿತು. ನಂತರ ಜೂನ್‍ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು, ಆದರೆ ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *