ಮಾವನ ಮಗನ ಜೊತೆ ಮದುವೆ ಆಗ್ತಿಲ್ಲ ಗಾಯಕಿ ಮಂಗ್ಲಿ

Public TV
2 Min Read

ಪರೂಪದ ಕಂಠದ ಮೂಲಕ ಫೇಮಸ್ ಆಗಿರುವ ಗಾಯಕಿ (Singer) ಮಂಗ್ಲಿ (Mangli) ಅತೀ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬಂದಿತ್ತು. ಅದು ತನ್ನ ಮಾವನ ಮಗನ (Father-in-law’s son) ಜೊತೆಯೇ ಹೊಸ ಜೀವನಕ್ಕೆ (Marriage) ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಯ ಕುರಿತಂತೆ ಮಂಗ್ಲಿ ಗರಂ ಆಗಿದ್ದಾರೆ. ಇಂತಹ ಸುಳ್ಳು ಸುದ್ದಿಯನ್ನು ಹರಡಿಸಿರುವುದಕ್ಕೆ ಬೇಸರವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ತಾವು ಮದುವೆ ಆಗುತ್ತಿರುವ ವಿಚಾರ ಸುಳ್ಳು ಎಂದಿದ್ದಾರೆ.

ಯಾರಿದು ಮಂಗ್ಲಿ?

ಈ ಹಿಂದೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ `ಕಣ್ಣೇ ಅದಿರಿಂದಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೈದ್ರಾಬಾದ್‍ನಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ ಧ್ವನಿ ಈಗ ದೇಶವ್ಯಾಪಿ ಕ್ರಶ್ ಆಗಿತ್ತು. ಆ ಧ್ವನಿಯ ಗಾಯಕಿ ಮಂಗ್ಲಿ ಅವರದ್ದು, ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿದ್ದರು. `ಕಣ್ಣೇ ಅದಿರಿಂದಿ’ ಗಾಯಕಿ, ಕಪ್ಪು ಸುಂದರಿ ಮಂಗ್ಲಿಗೆ ಕ್ಲೀನ್‍ಬೋಲ್ಡ್ ಆಗಿತ್ತು ಕರುನಾಡು.

ಇದೇ ಧ್ವನಿ ಈಗ ಕೋಟಿ ಕೋಟಿ ಮೊಬೈಲ್‍ಗಳ ಖಾಯಂ ಸ್ಟೇಟಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಲೇ ಇದೆ. ಈಗಾಗಲೇ ಮಂಗ್ಲಿ ಯಾರು ಎಂದು ತಿಳದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸಿದ್ದರು.

ಈ ಹಾಡು ಹಾಡಿದ ಗಾಯಕಿ ಹಾಡು, ನಟನೆ, ನೃತ್ಯ ನಿರೂಪಣೆಯಲ್ಲಿ ಮಂಗ್ಲಿ ಆಂಧ್ರದದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿ ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ.

ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರತೀ ಸೀಸನ್‍ಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್