BBK 11: ದೊಡ್ಮನೆಗೆ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ

Public TV
1 Min Read

ಬಿಗ್ ಬಾಸ್ ಮನೆಯ (Bigg Boss Kannada 11) ಆಟ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಆಟ ಶುರುವಾಗಿ ಕೆಲವೇ ದಿನಕ್ಕೆ ಸ್ಪರ್ಧಿಯೊಬ್ಬರು ಮನೆಗೆ ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿದ್ದಾರೆ. ಅದು ಬೇರೆ ಯಾರು ಅಲ್ಲ. ಸಂಗೀತದ ಮೂಲಕ ರಂಜಿಸಿದ್ದ ಗಾಯಕ ಹನುಮಂತ (Hanumantha) ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ನಟ ಕಿಚ್ಚ ಸುದೀಪ್ ತಾಯಿ ನಿಧನ

ಹದಿನಾಲ್ಕು ಮಂದಿ ಇರುವ ಆಟದಲ್ಲಿ 15ನೇ ಸ್ಪರ್ಧಿಯ ಆಗಮನವಾಗಿದೆ. ಸಿಂಗರ್ ಆಗಿ ಗೆದ್ದು ಬೀಗಿದ್ದ ಜವಾರಿ ಹುಡುಗ ಹನುಮಂತ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ ಎಂಬ ಹಾಡಿನ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರ ಆಗಮನ ಕೆಲವರಿಗೆ ಖುಷಿ ಕೊಟ್ಟಿದ್ದರೆ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸಿದೆ.

ಇನ್ನೂ ಹನುಮಂತ ಊಟ ಮಾಡುವಾಗ, ಬಿಗ್ ಬಾಸ್ ಮಾತನಾಡಿಸಿದ್ದಾರೆ. ಇರಿ ಊಟ ಮಾಡಬೇಕಾದ್ರೆ, ನನಗೆ ತಲೆ ಓಡಲ್ಲ. ಆಮೇಲೆ ಮಾತನಾಡುತ್ತೇನೆ ಎಂದು ಬಿಗ್ ಬಾಸ್ ಗೆ ಹೇಳುತ್ತಾರೆ. ಅವರ ಮುಗ್ಧತೆ ನೋಡಿ ಮನೆಮಂದಿ ನಗುತ್ತಾರೆ. ಇನ್ನೂ ದೊಡ್ಮನೆಗೆ ಬಂದ ಮೊದಲ ದಿನವೇ ಹನುಮಂತ ಕ್ಯಾಪ್ಟನ್ ಆಗಿದ್ದಾರೆ. ಇನ್ನೂ ಅವರು ಕ್ಯಾಪ್ಟನ್ ಎಂದು ಘೋಷಿಸಿದ್ದೇ ಬಿಗ್ ಬಾಸ್. ಹಾಗಾಗಿ ಮನೆಮಂದಿ ದಂಗಾಗಿದ್ದಾರೆ. ಬಿಗ್ ಬಾಸ್ ಆದೇಶಕ್ಕೆ ಸ್ಪರ್ಧಿಗಳು ಸೈಲೆಂಟ್ ಆಗಿದ್ದಾರೆ. ಇನ್ನೂ ಸದಾ ಜಗಳಗಳ ಮೂಲಕ ಸುದ್ದಿ ಆಗೋ ಸ್ಪರ್ಧಿಗಳ ನಡುವೆ ಹನುಮಂತ ಸೆಡ್ಡು ಹೊಡೆಯುತ್ತಾರಾ? ಎಂದು ಕಾದುನೋಡಬೇಕಿದೆ.

Share This Article