ಇಂಗ್ಲೆಂಡ್ ಗಾಯಕ ಎಡ್ ಶೀರನ್ ಬೀದಿ ಬದಿಯ ಪ್ರದರ್ಶನಕ್ಕೆ ಬ್ರೇಕ್‌ ಹಾಕಿದ ಪೊಲೀಸರು

Public TV
1 Min Read

ಇಂಗ್ಲೆಂಡ್ ಮೂಲದ ಖ್ಯಾತ ಗಾಯಕ ಎಡ್ ಶೀರನ್ ((Ed Sheeran) ಅನುಮತಿ ಇಲ್ಲದೇ ಬೀದಿ ಬದಿಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, ಅವರ ಗಾಯನ ಪ್ರದರ್ಶನವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಇದನ್ನೂ ಓದಿ:ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ

ಎಡ್ ಶೀರನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ‘ಶೇಫ್ ಆಫ್ ಯು’ ಹಾಡನ್ನು ಉತ್ಸಾಹದಿಂದ ಹಾಡುತ್ತಾ ಪ್ರದರ್ಶನ ನೀಡುತ್ತಿದ್ದರು. ಅನುಮತಿ ಪಡೆಯದೇ ಹಾಡಿದಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಗಾಯನ ಪ್ರದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೈಕ್ ಫ್ಲಗ್ ಕಿತ್ತು ಕಾರ್ಯಕ್ರಮ ಸ್ಥಗಿತಗೊಳಿಸಿದ್ದಾರೆ.

ಎಡ್ ಶೀರನ್ ಗಾಯನಕ್ಕೆ ಪೊಲೀಸರು ಬ್ರೇಕ್ ಹಾಕಿದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ಹೊರಹಾಕಿದ್ದಾರೆ.

Share This Article