ಬಿಜೆಪಿಗೆ ಸೇರ್ಪಡೆಯಾದ ಗಾಯಕಿ ಅನುರಾಧಾ ಪೌಡ್ವಾಲ್

Public TV
1 Min Read

ನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದ ಬಾಲಿವುಡ್ ಸಿಂಗರ್ ಅನುರಾಧಾ ಪೌಡ್ವಾಲ್ (Anuradha Paudwal) ಅವರು ಇದೀಗ ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜಕೀಯ ಅಖಾಡಕ್ಕೆ ಕಾರವಾರದ (Karwar) ಗಾಯಕಿ ಎಂಟ್ರಿ ಕೊಟ್ಟಿದ್ದಾರೆ.

ಸನಾತನ ಧರ್ಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ನಾನು ಸೇರುತ್ತಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಇಂದು ಬಿಜೆಪಿ ಸೇರುತ್ತಿರುವುದು ನನ್ನ ಅದೃಷ್ಟ ಎಂದು ಗಾಯಕಿ ಅನುರಾಧಾ ಮಾತನಾಡಿದ್ದಾರೆ. ಮೋದಿ ನೇತೃತ್ವದ ಪಕ್ಷಕ್ಕೆ ಸೇರಿರುವ ಬಗ್ಗೆ ಗಾಯಕಿ ಸಂತಸ ವ್ಯಕ್ತಪಡಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಪ್ರಶ್ನೆ ಎದುರಾದಾಗ, ನನಗೆ ಈ ಬಗ್ಗೆ ಗೊತ್ತಿಲ್ಲ. ಮುಂದೆ ನೋಡೋಣ ಎಂದು ಅನುರಾಧಾ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದ ಕಾರವಾರದಲ್ಲಿ ಜನಿಸಿದ ಅನುರಾಧಾ ಪೌಡ್ವಾಲ್ ಅವರು ಕನ್ನಡದ ನನ್ನ ಪ್ರೀತಿಯ ಹುಡುಗಿ, ಪ್ರೀತ್ಸೆ ಚಿತ್ರದ ಹಾಡುಗಳು ಸೇರಿದಂತೆ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಬಹುಭಾಷೆಗಳಲ್ಲಿ 9000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ.

Share This Article