ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

Public TV
3 Min Read

ಕ್ರಿಸ್‍ಮಸ್ ಹಬ್ಬ ಬಂದರೆ ಸಾಕು ಥಟ್ಟನೆ ನೆನಪಾಗೋದು ಕೇಕ್. ಹೆಚ್ಚಿನ ಕೇಕ್ ಗಳನ್ನು ಮೊಟ್ಟೆ ಹಾಕಿಯೇ ಮಾಡುತ್ತಾರೆ. ಆದ್ರೆ ಈ ರೀತಿಯ ಕೇಕ್ ಎಲ್ಲರಿಗೂ ಇಷ್ಟವಾಗಲ್ಲ. ಆದ್ದರಿಂದ ಕೆಲವರಿಗಾಗಿ ಎಗ್‍ಲೆಸ್ ಕೇಕ್ ಮಾಡೋ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಾಗ್ರಿಗಳು
* ಮಿಕ್ಸೆಡ್ ಫ್ರೂಟ್ ಜ್ಯೂಸ್ / ಆರೆಂಜ್ / ದ್ರಾಕ್ಷಿ / ಮಾಂಗ್ಯೋ – 50 ಎಂಎಲ್
* ಗೋಡಂಬಿ – 3-4
* ದ್ರಾಕ್ಷಿ – 6-7
* ಖರ್ಜೂರ – 4-5
* ಬಾದಾಮಿ – 5-6
* ಟೂಟಿ ಫ್ರೂಟಿ – ಅರ್ಧ ಕಪ್
* ಕಪ್ಪು ದ್ರಾಕ್ಷಿ – 5-10
* ವಾಲ್‍ನಟ್ – 3-4
* ಚಕ್ಕೆ -ಅರ್ಧ ಇಂಚು
* ಲವಂಗ – 4
* ಏಲಕ್ಕಿ – 2-3
* ಶುಂಠಿ ಪೌಡರ್ – ಕಾಲು ಚಮಚ (ಒಣಶುಂಠಿ)
* ಸಕ್ಕರೆ – ಅರ್ಧ ಕಪ್
* ಮೈದಾ ಹಿಟ್ಟು – ಮುಕ್ಕಾಲು ಕಪ್
* ಬೇಕಿಂಗ್ ಪೌಡರ್ – ಅರ್ಧ ಚಮಚ
* ಬೇಕಿಂಗ್ ಸೋಡಾ – ಕಾಲು ಚಮಚ
* ಮಿಲ್ಕ್ ಪೌಡರ್ – 2 ಚಮಚ
* ಎಣ್ಣೆ – 3-4 ಚಮಚ (ಬೇಕಿದ್ದರೆ ಬೆಣ್ಣೆ, ತುಪ್ಪ ಬಳಸಬಹುದು)
* ವೆನಿಲಾ ಎಸೆನ್ಸ್ – 3-4 ಹನಿ
* ಹಾಲು – ಅರ್ಧ ಕಪ್

ಮಾಡುವ ವಿಧಾನ
* ಮೊದಲಿಗೆ ಒಂದು ಬೌಲ್‍ಗೆ ಮೇಲೆ ಹೇಳಿದ ಜ್ಯೂಸ್‍ಗಳಲ್ಲಿ ಯಾವುದಾದರು ಒಂದನ್ನು 50 ಎಂಎಲ್‍ರಷ್ಟು ಹಾಕಿಕೊಳ್ಳಿ. ಅದಕ್ಕೆ ಸಣ್ಣಗೆ ಕಟ್ ಮಾಡಿದ ಗೋಡಂಬಿ, ದ್ರಾಕ್ಷಿ, ಖರ್ಜೂರ, ಬಾದಾಮಿ, ಕಪ್ಪು ದ್ರಾಕ್ಷಿ, ವಾಲ್‍ನಟ್, ಟೂಟಿಫ್ರೂಟಿ ಸೇರಿಸಿ 1 ಗಂಟೆಗಳ ಕಾಲ ನೆನಸಿಡಿ. (ಫ್ರೀಜರ್ ನಲ್ಲಿ ಬೇಕಾದ್ರೂ ಇಡಬಹುದು)

* ಒಂದು ಮಿಕ್ಸಿಂಗ್ ಬೌಲ್‍ಗೆ ಅರ್ಧ ಕಪ್ ಮೈದಾ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಮಿಲ್ಡ್ ಪೌಡರ್ ಹಾಕಿ ಕಲಸಿ.
* ಬಳಿಕ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಪೌಡರ್ ಸೇರಿಸಿ ಪುಡಿ ಮಾಡಿದ ಮಿಶ್ರಣವನ್ನು ಅರ್ಧ ಚಮಚ ಸೇರಿಸಿ. (ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಮಸಾಲ ಸೇರಿಸಬಹುದು)
* ಬಳಿಕ ಅದಕ್ಕೆ ಎಣ್ಣೆ, ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ.

* ಇತ್ತ ಜ್ಯೂಸ್‍ನಲ್ಲಿ ನೆನಸಿಟ್ಟ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ. ಬಳಿಕ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ.
* ಕೇಕ್ ಮಿಶ್ರಣ ತುಂಬಾ ತೆಳ್ಳಗೆ ಆಗಬಾರದು. ತುಂಬಾ ಗಟ್ಟಿಯೂ ಆಗಬಾರದು. ಹೀಗಾಗಿ ಹಾಲನ್ನು ಮಿಶ್ರಣದ ಹದ ನೋಡಿಕೊಂಡು ಸೇರಿಸಬೇಕು.

* ಬಳಿಕ ಬೆಣ್ಣೆ/ಎಣ್ಣೆ/ತುಪ್ಪ ಸವರಿದ ಕೇಕ್, ಪ್ಯಾನ್‍ಗೆ ಮಿಶ್ರಣವನ್ನು ಹಾಕಿ. ಓವನ್‍ನಲ್ಲಿ 180 ಡಿಗ್ರಿಯಲ್ಲಿ 30ರಿಂದ 35ನಿಮಿಷ ಬೇಕ್ ಮಾಡಿ.
* ಓವನ್ ಇಲ್ಲದಿದ್ದರೆ ಕುಕ್ಕರ್ ಒಲೆ ಮೇಲಿಟ್ಟು ಅದಕ್ಕೆ ಮರಳು/ಉಪ್ಪು/ತಟ್ಟೆ ಇಡ್ಲಿ ಸ್ಟ್ಯಾಂಡ್ ಇಟ್ಟು 5 ನಿಮಿಷ ಕಾಯಲು ಬಿಡಿ.
* ಆಮೇಲೆ ಕೇಕ್ ಮಿಶ್ರಣ ಹಾಕಿದ್ದ ಪ್ಯಾನ್ ಅನ್ನು ಇಟ್ಟು ವಿಷಲ್ ತೆಗೆದು ಅರ್ಧ ಗಂಟೆಗಳ ಕಾಲ ಲೋ ಫ್ಲೇಮ್‍ನಲ್ಲಿ ಕುಕ್ ಮಾಡಿ.
* ಕೇಕ್ ಬೆಂದಿದ್ಯಾ ಎಂದು ಸ್ಟಿಕ್ ಇಟ್ಟು ನೋಡಿ. ತಣ್ಣಗಾದ ಬಳಿಕ ಕೇಕ್ ಅನ್ನು ಸಣ್ಣ ಸಣ್ಣಗೆ ಕಟ್ ಮಾಡಿ ಸರ್ವ್ ಮಾಡಿ. ಇದು ಎಗ್‍ಲೆಸ್ ಕೇಕ್ ಆಗಿರುವುದರಿಂದ ಹಲವು ದಿನಗಳವರೆಗೆ ಸ್ಟೋರ್ ಮಾಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *