ಲಂಡನ್ ಉದ್ಯಮಿ ಜೊತೆ ಸಾರಾ ಅಲಿ ಖಾನ್ ಮದುವೆ

Public TV
1 Min Read

ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ (Sara Ali Khan) ಸಿನಿಮಾಗಿಂತ ವೈಯಕ್ತಿಕ ವಿಚಾರದಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಲಂಡನ್ ಉದ್ಯಮಿ ಜೊತೆ ಸಾರಾ ಮದುವೆ (Wedding) ಫಿಕ್ಸ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

ನಟಿ ಸಾರಾ ಸಿನಿಮಾ ಅವಕಾಶಗಳು ಕಮ್ಮಿಯಾಗಿರೋದ್ರಿಂದ ಮದುವೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬುದು ಲೇಟೆಸ್ಟ್ ನ್ಯೂಸ್. ಲಂಡನ್ ಉದ್ಯಮಿಯೋರ್ವನ (London Businessman) ಜೊತೆ ಸದ್ಯದಲ್ಲೇ ನಿಶ್ಚಿತಾರ್ಥ ಫಿಕ್ಸ್ ಆಗಿದ್ದು, ಮುಂದಿನ ವರ್ಷ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅನೇಕರೊಂದಿಗೆ ನಟಿಯ ಹೆಸರು ಕೇಳಿ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಶುಭಮನ್ ಗಿಲ್ ಸೇರಿದಂತೆ ಅನೇಕರ ಜೊತೆ ನಟಿ ಡೇಟಿಂಗ್ ಸುದ್ದಿ ಹರಿದಾಡಿತ್ತು. ಆದರೆ ಯಾವುದಕ್ಕೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಲಂಡನ್ ಉದ್ಯಮಿ ಜೊತೆಗಿನ ಮದುವೆ ಮ್ಯಾಟರ್ ಜಸ್ಟ್ ಗಾಸಿಪ್ ಅಥವಾ ನಿಜವಾಗಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ? ಎಂದು ಸಾರಾ ಹೇಳುವವರೆಗೂ ಕಾದುನೋಡಬೇಕಿದೆ.

ಅಂದಹಾಗೆ, ಸಿಂಬಾ, ಲವ್ ಆಜ್ ಕಲ್, ಮರ್ಡರ್ ಮುಬಾರಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸಾರಾ ನಟಿಸಿದ್ದಾರೆ. ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸೈಫ್ ಪುತ್ರಿಗೆ ಸಿಗಲಿಲ್ಲ.

Share This Article