714 ಡೈಮಂಡ್‌ಗಳಿರುವ ದುಬಾರಿ ವಾಚ್‌ ಧರಿಸಿದ ಸಲ್ಮಾನ್‌ ಖಾನ್‌

Public TV
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) 58 ವರ್ಷವಾದ್ರೂ ಫಿಟ್‌ನೆಸ್ ಮತ್ತು ಫ್ಯಾಷನ್ ಕಡೆ ಹೆಚ್ಚು ಗಮನ ಕೊಡುತ್ತಾರೆ. ಇದೀಗ 714 ಡೈಮಂಡ್‌ಗಳಿರುವ ದುಬಾರಿ ವಾಚ್ ಅನ್ನು ಸಲ್ಮಾನ್ ಧರಿಸಿದ್ದಾರೆ. ಇದರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸಲ್ಮಾನ್ ಖಾನ್ ಹಾಕಿಕೊಂಡಿರುವ ಈ ವಾಚ್‌ನಲ್ಲಿ 152 ಬಿಳೆ ಪಚ್ಚೆ-ಕಟ್ ವಜ್ರಗಳಿಂದ ಅಲಕೃಂತಗೊಂಡಿದೆ. ಪ್ರತಿ ವಿಭಾಗದಲ್ಲಿ 76 ವಜ್ರಗಳೊಂದಿಗೆ ಜೋಡಿಸಲಾಗಿದೆ. ಆಕರ್ಷಣೆಯನ್ನು ಹೆಚ್ಚಿಸಲು 57 ಬ್ಯಾಗೆಟ್ ಕಟ್ ವಜ್ರಗಳಿಂದ ಈ ವಾಚ್‌ನ ಅಲಂಕರಿಸಲಾಗಿದೆ. 504 ಎಮರಾಲ್ಡ್ ಕಟ್ ಡೈಮಂಡ್ ಕೂಡ ಈ ವಾಚ್‌ನಲ್ಲಿವೆ. ಇವೆಲ್ಲವನ್ನೂ ಲೆಕ್ಕ ಹಾಕಿದರೆ 714 ಡೈಮಂಡ್‌ಗಳು ಈ ವಾಚ್‌ನಲ್ಲಿವೆ ಎಂದು ವರದಿಯಾಗಿದೆ. ಇದನ್ನೂ ಓದಿ:ಹೊಸಬರ ‘ಅಸುರರು’ ಚಿತ್ರದ ಟೀಸರ್ ರಿಲೀಸ್

 

View this post on Instagram

 

A post shared by Jacob Arabo (@jacobarabo)

ಇನ್ನೂ ಈ ‘ಬಿಲಿಯನೇರ್ III’ ಗಡಿಯಾರದ ಹಿಂದೆ ಜಾಕೋಬ್ ಅರಾಬೊ ಅವರ ಕೈ ಚಳಕ ಇದೆ. ಸೆಲೆಬ್ರಿಟಿಗಳಿಗಾಗಿ ಪರ್ಸನಲೈಸ್ಡ್ ವಾಚ್ ವಿನ್ಯಾಸ ಮಾಡುವಲ್ಲಿ ನಿಪುಣರಾಗಿರುವ ಕಂಪನಿಯ ಮಾಲೀಕರು ಆಗಿರುವ ಜಾಕೋಬ್ ತಮ್ಮ ಕೈಯಾರೆ ಸಲ್ಮಾನ್ ಖಾನ್‌ಗೆ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ. ಅಂದಹಾಗೆ ಸದ್ಯದ ಮಾಹಿತಿಯ ಪ್ರಕಾರ, ವಜ್ರಗಳಿಂದ ಅಲಂಕಾರಗೊಂಡಿರುವ ಈ ವಾಚ್‌ನ ಬೆಲೆ 41.5 ಕೋಟಿ ರೂ. ಮೌಲ್ಯದಾಗಿದೆ ಎನ್ನಲಾಗಿದೆ.

ಪ್ರಸ್ತುತ ‘ಸಿಖಂದರ್‌’ (Sikandar) ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಬ್ಯುಸಿಯಾಗಿದ್ದಾರೆ. ರಶ್ಮಿಕಾ (Rashmika Mandanna) ಮತ್ತು ಕಾಜಲ್‌ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದರ ಜೊತೆ ಜವಾನ್‌ ಡೈರೆಕ್ಟರ್ ಅಟ್ಲಿ ಜೊತೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ.

Share This Article