ಧಮ್ಕಿ ಪುಢಾರಿ ರಾಜೀವ್‌ ಗೌಡಗೆ ಜೈಲು

1 Min Read

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ (Amrutha Gowda) ಅವರಿಗೆ ಧಮ್ಕಿ ಹಾಕಿದ್ಧ ರಾಜಕೀಯ ಪುಢಾರಿ ರಾಜೀವ್‌ ಗೌಡ (Rajeev Gowda) ಜೈಲು ಸೇರಿದ್ದಾನೆ.

ಕೇರಳದಲ್ಲಿ ಸೋಮವಾರ ಬಂಧನವಾಗಿದ್ದ ರಾಜೀವ್‌ ಗೌಡನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದ ಬಳಿಕ ಪೊಲೀಸರು ಇಂದು ಜೆಎಂಎಫ್‌ಸಿ ಕೋರ್ಟ್ (JMFC Court) ಮುಂದೆ ಹಾಜರು ಪಡಿಸಿದರು. ರಾಜೀವ್‌ಗೌಡ ಪರ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿ ಜಾಮೀನು ಅರ್ಜಿ ಸಲ್ಲಿಸಿದರು.

ಪೊಲೀಸರ ಪರ ವಾದ ಮಂಡಿಸಿದ ವಕೀಲ ಮೊಹಮ್ಮದ್ ಖ್ವಾಜಾ, ಆರೋಪಿಯ ಮೊಬೈಲ್ ಸೀಜ್ ಮಾಡಬೇಕಿದೆ. ಪರಾರಿಯಾಗಲು ಬಳಸಿದ್ದ ಕಾರು ವಶಕ್ಕೆ ಪಡೆಯಬೇಕಿದೆ. ಇನ್ನೂ ವಿಚಾರಣೆ ನಡೆಸಬೇಕಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಅಂತ ವಾದಿಸಿದರು. ಅಂತಿಮವಾಗಿ ರಾಜೀವ್‌ಗೌಡನ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್ 14 ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ರಾಜೀವ್‌ಗೌಡಗೆ ಆಶ್ರಯ ನೀಡಿದ್ದಮಂಗಳೂರು ಉದ್ಯಮಿ ಮೈಕಲ್‌ಗೆ ಜಾಮೀನು ಮಂಜೂರಾಯ್ತು. ಈ ಮಧ್ಯೆ, ರಾಜೀವ್‌ಗೌಡ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದಾನೆ.

 

Share This Article