ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

Public TV
1 Min Read

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಮನೆಯ ಖಾಸಗಿ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಡಿವೋರ್ಸ್ ಸುದ್ದಿ ನಡುವೆ ಬಿಗ್ ಬಿ ಮೊಮ್ಮಗಳು ನವ್ಯಾ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ನವ್ಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಚಿತ್ರರಂಗದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಕಾಮನ್ ಆಗಿದೆ. ಸದ್ಯ ಸ್ಟಾರ್‌ ನಟಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್‌ ಬಚ್ಚನ್ ದಾಂಪತ್ಯ ಮುರಿದು ಬಿದ್ದಿದೆ ಎಂಬ ಸುದ್ದಿಯ ನಡುವೆ‌ ಈಗ ಸಿದ್ಧಾಂತ್ ಪ್ರೀತಿಗೆ ನವ್ಯಾ (Navya Naveli Nanda) ಗುಡ್ ಬೈ ಹೇಳಿದ್ದಾರೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಅಣ್ಣನ ಗೆಳೆಯನ ಮೇಲೆ ನಿಹಾರಿಕಾಗೆ ಪ್ಯಾರ್

ಕಳೆದ 2 ವರ್ಷಗಳಿಂದ ಸಿದ್ಧಾಂತ್ ಮತ್ತು ನವ್ಯಾ ಲವ್ವಿ ಡವ್ವಿ ಶುರುವಾಗಿತ್ತು. ಮುಂಬೈ ಬೀದಿಗಳಲ್ಲಿ ಜೋಡಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಈ ಜೋಡಿಯ ನಡುವೆ ಈಗ ಬಿರುಕು ಮೂಡಿದೆ ಎನ್ನಲಾಗಿದೆ. ಬ್ರೇಕಪ್‌ಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಈಗ ಬ್ರೇಕಪ್ ನ್ಯೂಸ್ ಮಾತ್ರ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

ಅಷ್ಟಕ್ಕೂ ಈ ಬ್ರೇಕಪ್ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದು ಈ ಜೋಡಿಯೇ ತಿಳಿಸಬೇಕಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ. ಸದ್ಯ ಸಿದ್ಧಾಂತ್ ಮತ್ತು ನವ್ಯಾ ದೂರ ಆಗಿರುವ ವಿಷ್ಯ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ನಿಜವೇ ಆಗಿದ್ದಲ್ಲಿ ಇಬ್ಬರೂ ಮತ್ತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ.

Share This Article