– ವಿದ್ಯಾರ್ಥಿಗಳಿಂದ ಶ್ರೀಗಳಿಗಾಗಿ ಪ್ರಾರ್ಥನೆ
ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwara Swamiji) ಗಳ ಆರೋಗ್ಯ ಸ್ಥಿರವಾಗಿದೆ ಎಂದು ಡಾ.ಎಸ್.ಬಿ ಪಾಟೀಲ್ (Dr. S B Patil) ತಂಡದಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ.
ಜಾಸ್ತಿ ಆಹಾರ ಸ್ವೀಕರಿಸ್ತಿಲ್ಲ ಅಷ್ಟೇ. ಗಂಜಿ, ನೀರು, ದ್ರವಾಹಾರ ಕೊಡ್ತಿದ್ದೀವಿ. ಬೇಗ ಚೇತರಿಕೆ ಆಗ್ತಾರೆ. ಹೆಚ್ಚಿನ ಚಿಕಿತ್ಸೆಯ ಅಶ್ಯಕತೆ ಇಲ್ಲ. ಭಕ್ತರ ಜೊತೆ ಶ್ರೀಗಳು ಮಾತನಾಡಿದ್ದಾರೆ ಎಂದು ಡಾ. ಎಸ್.ಬಿ. ಪಾಟೀಲ್, ಡಾ.ಮಲ್ಲನ್ಣ ಮೂಲಿಮನಿ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ
ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆ ಕಾಣುತ್ತಿದ್ದು, ಜ್ಞಾನಯೋಗಾಶ್ರಮಕ್ಕೆ ನಾಯಕರ ದಂಡೇ ಹರಿದುಬರುತ್ತಿದೆ. ಕಾಂಗ್ರೆಸ್ ನಾಯಕರ ಎಂ.ಬಿ ಪಾಟೀಲ್, ಎಂ.ಎಲ್.ಸಿ ಪ್ರಕಾಶ್ ಹುಕ್ಕೇರಿ, ಎಂ.ಬಿ ಪಾಟೀಲ್ ಜೊತೆ ಶ್ರೀಗಳು ಮೆದು ಧ್ವನಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳು ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವುದು ಬೇಡ. ಭಕ್ತರು ವದಂತಿಗೆ ಕಿವಿಗೊಡಬೇಡಿ ಎಂದು ಸಿದ್ದೇಶ್ವರ ಶ್ರೀ ಭೇಟಿ ಬಳಿಕ ಸುತ್ತೂರು ಶ್ರೀ (Suttur Sri) ಗಳು ಸ್ಪಷ್ಟನೆ ನೀಡಿದ್ದಾರೆ. ಇತ್ತ ಸಿದ್ದೇಶ್ವರ ಶ್ರೀಗಳ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ಮಾಣಿಕೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಜ್ಞಾನಯೋಗಾಶ್ರಮದ ಎದುರು ಸಿದ್ದೇಶ್ವರ ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ಭಕ್ತಗಣ ಹಾಗೂ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿಯವರ ಗುರುಗಳಾಗಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಅವ್ರ ಗದ್ದುಗೆಗೆ ವಿಷೇಶ ಪೂಜೆ ಸಲ್ಲಿಸಿದ್ರು. ಹೂ, ಹಾರ, ಕಾಯಿ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಂಗಳಾರತಿ ಮಾಡಿ, ಆದ್ಯಾತ್ಮದ ದೇವರು ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ರು.