ಸಿದ್ದೇಶ್ವರ ಸ್ವಾಮಿ ಬಲಗಡೆ ಹೂ ಪ್ರಸಾದ – ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವು ನಿಶ್ಚಿತನ?

Public TV
2 Min Read

ಹಾಸನ: ಚನ್ನಪಟ್ಟಣದಲ್ಲಿ (Channapatna) ಮಗ ಗೆಲ್ಲುವಂತೆ ಮಾಡು ಎಂದು ಕುಮಾರಸ್ವಾಮಿ (HD Kumaraswamy) ದಂಪತಿ ಹಾಸನದ ಹಾಸನಂಬೆ ಮತ್ತು ಸಿದ್ದೇಶ್ವರ ಸ್ವಾಮಿಯ (Siddeshwara Swamy) ಮೊರೆ ಹೋಗಿದ್ದರು. ಈ ವೇಳೆ ಸಿದ್ದೇಶ್ವರ ಸ್ವಾಮೀಜಿಯ ಬಲಗಡೆಯಿಂದ ಹೂ ಕೆಳಗೆ ಬಿದ್ದಿದೆ.

ಇದನ್ನು ಗಮನಿಸಿದ ಅನಿತಾ ಅವರು ಕುಮಾರಸ್ವಾಮಿಗೆ ಇದನ್ನು ತಿಳಿಸಿದ್ದಾರೆ. ದರ್ಶನದ ಬಳಿಕ ಮಾತನಾಡಿದ ಹೆಚ್‌ಡಿಕೆ, ಈ ಬಾರಿಯಾದರೂ ಮಗನಿಗೆ ಗೆಲುವು ಸಿಗಲಿ ಎಂದು ಪಾರ್ಥಿಸಿದ್ದೇನೆ ಎಂದರು. ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿರುವ ನಿಖಿಲ್ ಕುಮಾರಸ್ವಾಮಿ, ಮಾಕಳಿ, ನಾಗವಾರ, ದಶವಾರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ತೆರೆದ ವಾಹನದ ಮೂಲಕ ಕ್ಯಾಂಪೇನ್ ಮಾಡಿದರು. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗ ಅಂತ ಚರ್ಚೆ ಜೋರಾಗಿದೆ. ಹೀಗಾಗಿ, ಕೋಡಂಬಳ್ಳಿಯಲ್ಲಿ ಯೋಗೇಶ್ವರ್-ಡಿಕೆ ಸುರೇಶ್ ಕಾರ್ಯಕರ್ತರ ಸಮನ್ವಯ ಸಭೆ ನಡೆಸಿದ್ದಾರೆ. ಸಿಪಿವೈ ಮಾತನಾಡಿ, ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು. ಕಣ್ಣೀರು ಹಾಕೋಕೆ, ನಾಟಕ ಮಾಡೋಕೆ ನನಗೆ ಬರಲ್ಲ. ಮೊನ್ನೆ 500 ಬಸ್ ಮಾಡಿ ಜನ ಸೇರಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಎಷ್ಟಾದರೂ ಹಣ ತಂದು ಚುನಾವಣೆ ಮಾಡಲು ನಿಂತಿದ್ದಾರೆ. ಅಲ್ಲದೇ ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ. ನಾನು, ಸುರೇಶ್ ಸೇರಿ ಕೆಆರ್‌ಎಸ್‌ನಿಂದ ಮಾರ್ಕೋನಹಳ್ಳಿ ಡ್ಯಾಂ ಮೂಲಕ ಕಣ್ವ, ಇಗ್ಗಲೂರು ಡ್ಯಾಮ್‌ಗೆ ನೀರು ತರಬಹುದು ಎಂದರು. ಇದನ್ನೂ ಓದಿ: ತುಮಕೂರು| ರಾಜಕೀಯಕ್ಕಿಂತ ಅಭಿವೃದ್ಧಿ ಮುಖ್ಯ, ಕೊಟ್ಟ ಮಾತು ಉಳಿಸಿಕೊಳ್ಳುವೆ: ಸೋಮಣ್ಣ

ಇನ್ನು, ಶಾಸಕ ಹೆಚ್‌ಸಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಮನೆದೇವರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನು ಹೇಳಿದ್ದು ಇದೇ ಯಡಿಯೂರಪ್ಪ. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ ಎಂದು ಟೀಕಿಸಿದರು. ಈ ಮಧ್ಯೆ, ಚನ್ನಪಟ್ಟಣ ಸೂಕ್ಷ್ಮಾತಿ ಸೂಕ್ಷ್ಮ ಕ್ಷೇತ್ರ ಆಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪೊಲೀಸರು, ಅರೆಸೇನಾ ಪಡೆ ಪಥ ಸಂಚಲನ ನಡೆಸಿತು. ಇದನ್ನೂ ಓದಿ: ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

Share This Article