2028 ವರೆಗೆ ಸಿದ್ದರಾಮಯ್ಯ ಸಿಎಂ, ಅವ್ರ ನೇತೃತ್ವದಲ್ಲೇ ಮುಂದಿನ ಚುನಾವಣೆ: ಜಮೀರ್‌

1 Min Read

ಬಳ್ಳಾರಿ: ಸಿಎಂ ಪರವಾಗಿ ಯತೀಂದ್ರ (Yathindra Siddaramaiah) ಬ್ಯಾಟಿಂಗ್‌ ಮಾಡಿದ್ದರು. ಈಗ ಆಪ್ತ ಸಚಿವ ಜಮೀರ್‌ ಅಹ್ಮದ್‌ ಸಿದ್ದರಾಮಯ್ಯ ಪರ‌ ಮತ್ತೆ ಮಾತನಾಡಿದ್ದಾರೆ. 2028ರವರೆಗೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ (Zameer Ahmed) ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಈಗ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಸಾರಥ್ಯದಲ್ಲಿ 2028ರ ಚುನಾವಣೆಗೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಅಪಘಾತ – ಸಾವಿಗೀಡಾಗಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋಟಿ ಪರಿಹಾರ

ನಮ್ಮದು ಹೈಕಮಾಂಡ್ ಪಕ್ಷ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ನಮ್ಮ ಹಾಗೂ ನಾಗೇಂದ್ರ ಅವರ ಕೈಯಲ್ಲಿಲ್ಲ ಎಂದು ಹೇಳಿದರು.
Share This Article