ಬ್ರಾಹ್ಮಣ ಅಡುಗೆ ಭಟ್ಟ ಬಂದ್ರೆ ನಮಸ್ಕಾರ ಮಾಡ್ತಾರೆ, ಹಿಂದುಳಿದವನು ಶ್ರೀಮಂತನಾಗಿದ್ರೂ ಏನ್ಲಾ ಅಂತಾರೆ: ಸಿದ್ದು

Public TV
2 Min Read

ಬೆಂಗಳೂರು: ಒಬ್ಬ ಬ್ರಾಹ್ಮಣ ಅಡುಗೆ ಭಟ್ಟ ಬಂದರೆ ಎಲ್ಲರೂ ಬಗ್ಗಿ ನಮಸ್ಕಾರ ಮಾಡುತ್ತಾರೆ. ಆದರೆ ಹಿಂದುಳಿದವರು ಎಷ್ಟೇ ಶ್ರೀಮಂತರಾಗಿದ್ದರೂ ಏನ್ಲಾ ಅಂತಾ ಮಾತಾಡಿಸುತ್ತಾರೆ ಎಂದು ಗುಲಾಮಗಿರಿ ಮನಸ್ಥಿತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಮಗೆ ಗುಲಾಮಗಿರಿ ಮನಸ್ಥಿತಿ ಇನ್ನೂ ಹೋಗಿಲ್ಲ. ಇದೇ ಗುಲಾಮಗಿರಿ ಮನಸ್ಥಿತಿ. ಈ ಗುಲಾಮಗಿರಿ ಮನಸ್ಥಿತಿ ಹೋಗಬೇಕು ಎಂದು ಹೇಳಿದ್ದಾರೆ.

ಶಿಕ್ಷಣ, ಅಧಿಕಾರ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಅವಕಾಶ ಸಿಕ್ಕರೆ ಎಲ್ಲ ಪ್ರತಿಭೆಗಳು ಹುಟ್ಟಿಕೊಳ್ತಾರೆ. ಯಾರು ಸಮಾಜದಲ್ಲಿ ಅಸಮಾನತೆ ಸೃಷ್ಟಿ ಮಾಡಿದ್ದಾರೋ ಅವರೇ ಮೀಸಲಾತಿ ಪ್ರಶ್ನೆ ಮಾಡ್ತಾರೆ. ಎಷ್ಟು ದಿನ ಬೇಕು ಮೀಸಲಾತಿ? ಇನ್ನೂ ಏಕೆ ಬೇಕು‌ ಮೀಸಲಾತಿ ಅಂತಾ ಪ್ರಶ್ನೆ ಮಾಡ್ತಾರೆ. ಚತುರ್ ವರ್ಷದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಶಿಕ್ಷಣ, ಅಧಿಕಾರ ಎನ್ನುವಂತಿತ್ತು. ಇದು ಮೀಸಲಾತಿ ಅಲ್ಲವಾ? ಇದೊಂದು ರೀತಿ ಅಲಿಖಿತ ಮೀಸಲಾತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ

ಆರ್ಯರು ವಲಸೆ ಬಂದರು ಅಂದ್ರೆ ಎಲ್ಲ ನನ್ನ ಮೇಲೆ ಬೀಳ್ತಾರೆ. ದ್ರಾವಿಡರ ಮೇಲೆ ದಬ್ಬಾಳಿಕೆ ಮಾಡಿದ್ರು ಅಂದ್ರೆ ಕೋಪ ಬಂದು ಬಿಡುತ್ತೆ ಅವರಿಗೆ. ನನ್ನ ಮೇಲೆ ಮುಗಿ ಬಿದ್ದುಬಿಡ್ತಾರೆ. ಮಿಲ್ಲರ್ ಆಯೋಗವನ್ನು ವಿರೋಧ ಮಾಡಿದವರು ಯಾರು? ಆ ಸತ್ತ ವ್ಯಕ್ತಿ ಹೇಳಿದ್ರೆ ನಮ್ಮ ಮೇಲೆ ಬರ್ತಾರೆ. ನಾನು ಒಬ್ಬ ಮಾತಾಡಿದ್ರೆ ಅವರು 20 ಜನ ಬರ್ತಾರೆ. ನಮ್ಮವರೂ ಒಬ್ಬರೂ ಮಾತಾಡಲ್ಲ, ಸುಮ್ಮನೇ ಇರ್ತಾರೆ. ಸಿದ್ದರಾಮಯ್ಯ ತಾನೇ ಬೈಯ್ಯಿಸ್ಕೊಳ್ಳೋದು ಅಂತಾ ಸುಮ್ಮನಾಗ್ತಾರೆ ಎಂದು ಮಾತನಾಡಿದ್ದಾರೆ.

ಈ ಹಿಂದೆ ಬ್ರಾಹ್ಮಣರು ಮಾತ್ರ ಓದಬೇಕಿತ್ತು, ಬ್ರಾಹ್ಮಣರು ಮಾತ್ರ ಅಧಿಕಾರ ಹೊಂದಬೇಕಿತ್ತು. ಇದು ಮೀಸಲಾತಿ ಅಲ್ವಾ? ಕೊಳಕು ಕೆಲಸ ಬಿಟ್ಟು ಅವರು‌ ಮಜಾ ಮಾಡ್ತಿದ್ರು. ಇದು ಅಲಿಖಿತ ಮೀಸಲಾತಿ. ಏಕೆ ಮೀಸಲಾತಿ ಕೊಡಬೇಕು. ಮೀಸಲಾತಿ ಎಷ್ಟು ವರ್ಷ ಇರಬೇಕು, ಪ್ರತಿಭೆಗಳಿಗೆ ತೊಂದರೆ ಆಗೋದಿಲ್ಲವಾ ಎಂದು ಪ್ರಶ್ನೆ ಮಾಡ್ತಾರೆ. ಸಮಾಜದಲ್ಲಿ ಅಸಮಾನತೆ ಉಂಟಾಗಲು ಕಾರಣರಾದವರೇ ಈಗ ಪ್ರಶ್ನೆ ಕೇಳ್ತಿರೋದು ಎಂದು ಮೀಸಲಾತಿ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಎಲ್ಲಿಯವರಿಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯತನಕ ಮೀಸಲಾತಿ ಇರಲೇಬೇಕು ಎಂದು ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ. ಅಂಬೇಡ್ಕರ್ ಅವರು ಎಸ್‌ಸಿ, ಎಸ್ಟಿಗೆ ಮೀಸಲಾತಿ ಕೊಟ್ಟರು. 90ರಲ್ಲಿ ಓಬಿಸಿ ಮೀಸಲಾತಿ ಸಿಕ್ಕಿದೆ. ವಿ.ಪಿ.ಸಿಂಗ್ ಬಂದ ಮೇಲೆ ಮೀಸಲಾತಿ ಸಿಕ್ಕಿದೆ. ಆಗ ವಿರೋಧ ಮಾಡಿದವರು ಯಾರು ಗೊತ್ತಾ? ಈಗ ಅಂಬೇಡ್ಕರ್ ಬಗ್ಗೆ, ದಲಿತರ ಬಗ್ಗೆ ಮಾತಾಡುತ್ತಾರಲ್ಲ ಅವರೇ. ರಥಯಾತ್ರೆ ಮಾಡಿದವರು ಯಾರು? ಸತ್ಯ ಮಾತಾಡಿದ್ರೆ ನಾವು ಬೈಯ್ಯಿಸಿಕೊಳ್ಳಬೇಕು ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

ಪ್ರಧಾನಿ ಮೋದಿ ಸರ್ಕಾರ‌ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ 10% ಮೀಸಲಾತಿ ಜಾರಿಗೆ ತಂದರು. ಚರ್ಚೆ ಮಾಡದೇ ತರಾತುರಿಯಲ್ಲಿ ಜಾರಿಗೊಳಿಸಿದರು. ಇದು ಸಂವಿಧಾನದಲ್ಲಿ ಇದೆಯಾ? ಇದು ಸಂವಿಧಾನಕ್ಕೆ ವಿರೋಧ ಅಲ್ಲವಾ? ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತಿದೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತಾ ಸಂವಿಧಾನದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *