ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

Public TV
2 Min Read

– ಕೇಂದ್ರದಿಂದ ನಮಗೆ 11,495 ಕೋಟಿ ರೂ. ನಷ್ಟವಾಗಿದೆ; ಸಿಎಂ

ರಾಯಚೂರು: ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ನಾವು ಗ್ರ‍್ಯಾಂಟ್ ಕೊಡುವುದೆಲ್ಲಾ ವಿಶೇಷ ಅನುದಾನ ಅಂತಿರುತ್ತದೆ. ಅವರು ಹೇಳುತ್ತಾರೆ, ಶಾಸಕ ರಾಜು ಕಾಗೆಯನ್ನ (Raju Kage) ಕರೆದು ಮಾತನಾಡ್ತಿನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಜಿಲ್ಲೆಯ ಯರಗೇರಾದಲ್ಲಿ ಸರ್ಕಾರದ ವಿರುದ್ಧ ಮತ್ತೊಬ್ಬ ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅನುದಾನದ ವರ್ಕ್ ಆರ್ಡರ್ ಸಿಗುತ್ತಿಲ್ಲ ಎಂದು ಎರಡು ದಿನದಲ್ಲಿ ರಾಜೀನಾಮೆ ನೀಡಿದ್ದರೂ ಅಚ್ಚರಿಯಿಲ್ಲ ಎಂದಿದ್ದಾರೆ. ಅವರು ಹೇಳುತ್ತಾರೆ, ಅವರಿಗೇನು? ಸಿಎಂ ಅನುದಾನ ಅಂತಾ ಇದೀಯಾ? ರಾಜು ಕಾಗೆಯನ್ನು ಕರೆದು ಮಾತಾಡುತ್ತೇನೆ ಎಂದರು.ಇದನ್ನೂ ಓದಿ: ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

ಇನ್ನೂ ವಸತಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ. ಯಾವ ಸನ್ನಿವೇಶದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ರಾಯಚೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಬಿ.ಆರ್ ಪಾಟೀಲ್ (BR Patil)  ಅವರನ್ನ ಸಿಎಂ ಕರೆದರೂ ಬಂದಿಲ್ಲ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಾನು ಅವರನ್ನು ಇಲ್ಲಿಗೆ ಕರೆದಿದ್ದೆ, ಆದರೆ ಅವರು ಆಯೋಜಕರು ನನ್ನನ್ನು ಕರೆದಿಲ್ಲ ಬರಲ್ಲ ಎಂದರು. ಜೂ.25ಕ್ಕೆ ಭೇಟಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

ಸಚಿವ ಹೆಚ್‌ಕೆ ಪಾಟೀಲ್ (HK Patil) ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಅದು ನಮ್ಮ ಕಾಲದಲ್ಲಿ ನಡೆದಿಲ್ಲ. ವಿಶೇಷ ಕೋರ್ಟ್ ಮಾಡಿ ತ್ವರಿತಗತಿಯಲ್ಲಿ ಇತ್ಯರ್ಥ ಮಾಡಿ ಎಂದಿದ್ದಾರೆ. ಅಕ್ರಮ ಗಣಿಗಾರಿಗೆ ನಡೆಯುತ್ತಿರುವುದಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಲೋಕಾಯುಕ್ತ ಸಂತೋಷ ಹೆಗಡೆ ವರದಿ ಆಧರಿಸಿ ನಾನು ಅಸೆಂಬ್ಲಿ ಅಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಅಂದಿನ ಸರ್ಕಾರದಿಂದ ಸರಿಯಾದ ಉತ್ತರ ಬರಲಿಲ್ಲ. ಹೀಗಾಗಿ ನಡೆದುಕೊಂಡೇ ಬರುತ್ತೇನೆ ಅಂತ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು ಎಂದರು.

ದೆಹಲಿಗೆ ತೆರಳಿ ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನ ಭೇಟಿ ಮಾಡಬೇಕು ಅಂದುಕೊಂಡಿದ್ದೀನಿ. 16ನೇ ಹಣಕಾಸಿನ ಸಂಬಂಧ ಬಿಲ್‌ಗಳು ಬಾಕಿಯಿವೆ. ಅವುಗಳ ಬಗ್ಗೆ ಮಾತನಾಡಲು ನಾಳೆ ರಾಷ್ಟ್ರಪತಿ ಸಮಯ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯಕ್ಕೆ ಪ್ರಹ್ಲಾದ್ ಜೋಶಿ (Prahlad Joshi) ಏನೆಲ್ಲಾ ಮಾಡಿದ್ದಾರಂತೆ? ಅವರನ್ನು ಪವರ್ ಫುಲ್ ಅಂತಾರೆ, ಪ್ರಧಾನಿಗೆ ಬಹಳ ಹತ್ತಿರವಿದ್ದಾರೆ. 15ನೇ ಹಣಕಾಸಿನಲ್ಲಿ 5,435 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿದ್ದರು. ಶಿಫಾರಸು ಮಾಡಿ ಆಮೇಲೆ ಏನು ಮಾಡಿದರು? ಕರ್ನಾಟಕದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಬಿಜೆಪಿಯ ಒಬ್ಬ ಸಂಸದನಾದರೂ ಮಾತನಾಡಿದ್ದಾರಾ? 11,495 ಕೋಟಿ ರೂ. ನಮಗೆ ನಷ್ಟವಾಗಿದೆ. 14 ರಿಂದ 15ನೇ ಹಣಕಾಸು ಯೋಜನೆಗೆ ಲೆಕ್ಕ ಹಾಕಿದರೆ, ರಾಜ್ಯಕ್ಕೆ 89 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಜೋಶಿ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

Share This Article