ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

Public TV
2 Min Read

ಹಾವೇರಿ: ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು ಎಂದು ಶಿಗ್ಗಾಂವಿಯಲ್ಲಿ (Shiggaon) ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

ಈ ಬಗ್ಗೆ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಎಷ್ಟು ಧೈರ್ಯ ಮಾಡಬಹುದು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. 10 ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವನಿರ್ಧಾರಿತವಾಗಿದೆ. ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ. ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯಗೆ ಗೊತ್ತಾ? ಇದೆಲ್ಲ ಸ್ಟೆಜ್ ಮ್ಯಾನೇಜ್ಡ್ ವಿಚಾರಣೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನನ್ನು ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ದೀರಿ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

ಲೋಕಾ ಅಧಿಕಾರಿಗಳು ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯ ಇಲ್ಲ. ವಿಚಾರಣೆಗೆ ಬರಲಿಲ್ಲ ಅಂತ ಅನಿಸಿಕೊಳ್ಳಬಾರದು ಎಂದು ಹೋಗಿದ್ದಾರೆ. ಇದು ಪೂರ್ವನಿರ್ಧಾರಿತ ಎಂದು ನಿಮ್ಮ ಟಿಪಿ ನೋಡಿದರೆ ಗೊತ್ತಾಗುತ್ತದೆ. ಕೋರ್ಟ್‌ಗೂ ನಾವು ಹೋಗುತ್ತೇವೆ. ಸಿಎಂ ದೋಖಾ ಮಾಡುತ್ತಿದ್ದಾರೆ, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Mysuru| ಬಿಜೆಪಿಯಿಂದ ಸಿಎಂ ವಿರುದ್ಧ ‘ಗೋ ಬ್ಯಾಕ್’ ಚಳುವಳಿ- ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಈ ಹಿಂದೆ ಸಿಎಂ ಆಗಿದ್ದ ಬೊಮ್ಮಾಯಿ (Basavaraj Bommai) ಮೇಲೆ ಹಿಂದೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಪೇ ಸಿಎಂ ಇವತ್ತಿಗೂ ಸಾಬೀತು ಮಾಡುವುದಕ್ಕೆ ಆಗಲಿಲ್ಲ. ಅಬಕಾರಿ ಇಲಾಖೆಯಲ್ಲಿ ಲಂಚದ ಆರೋಪ ಕೇಳಿ ಬಂದಿದೆ. ನಮ್ಮ ಮೇಲಿನ ಆರೋಪ ಸತ್ಯವಾದರೆ ಈಗಿನ ಆರೋಪ ಕೂಡ ಸತ್ಯವೇ. ಅಬಕಾರಿ ಇಲಾಖೆ ಸಚಿವರ ಕೆಲಸ ಏನು? ಅವರೇನಾದರೂ ಬಾಟಲ್ ಲೆಕ್ಕ ಹಾಕ್ತಾರಾ? ಸಚಿವರಿಗೆ ಕೆಲಸ ಇಲ್ಲ ಅಂದಮೇಲೆ ಸಚಿವರು ಯಾಕೆ? ವಸೂಲಿ ಮಾಡುವುದೇ ಸಚಿವರ ದಂಧೆಯಾ? ಕಾಂಗ್ರೆಸ್‌ನವರು (Congress) ಇದನ್ನು ಒಪ್ಪಿಕೊಳ್ಳಬೇಕು. ವಾಲ್ಮೀಕಿ ನಿಗಮದಲ್ಲೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಎಸ್.ಡಿ.ಎ ಆತ್ಮಹತ್ಯೆ ತೀವ್ರ ತನಿಖೆ ಆಗಬೇಕು. ಸಚಿವರು ತಪ್ಪಿತಸ್ಥರಾದರೆ ಅವರನ್ನೂ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: MUDA Case; ಸತತ 2 ಗಂಟೆ ವಿಚಾರಣೆ; ಸಿಎಂ ಸಿದ್ದರಾಮಯ್ಯಗೆ 40 ಕ್ಕೂ ಹೆಚ್ಚು ಪ್ರಶ್ನೆಗಳು

Share This Article