– ಹಾಸನದಲ್ಲಿ ಜೆಡಿಎಸ್‌ನವರು ಗೃಹಲಕ್ಷ್ಮಿ ತಗೋತಿಲ್ವಾ? ಅಂತ ಸಿಎಂ ಪ್ರಶ್ನೆ
ಹಾಸನ: ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಏಳು ಜಿಲ್ಲೆಗಳಿಗೆ ನೀರು ಕೊಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.
ಹಾಸನದ (Hassan) ಅರಸೀಕೆರೆ (Arsikere) ತಾಲೂಕು ಕ್ರೀಡಾಂಗಣದಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. 2018ರಲ್ಲಿ ಯಡಿಯೂರಪ್ಪ (Yediyurappa) ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಅವರು ರಾಜ್ಯದ ಅಭಿವೃದ್ಧಿ ಮಾಡುವ ಬದಲು ಲೂಟಿ ಹೊಡೆದರು. ಎತ್ತಿನಹೊಳೆ ಯೋಜನೆ ಆಗೋದೆ ಇಲ್ಲ ಎಂದು ಕುಮಾರಸ್ವಾಮಿ ರಾಜಕೀಯವಾಗಿ ಹೇಳಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ 7 ಜಿಲ್ಲೆಗಳಿಗೆ ನೀರು ಕೊಡ್ತೇವೆ ಎಂದರು. ಇದನ್ನೂ ಓದಿ: ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್
ಜೆಡಿಎಸ್‌ನವರು ಗೃಹಲಕ್ಷ್ಮಿ ತಗೋತಿಲ್ವಾ?
ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುತ್ತಿದೆ. ಪಕ್ಷಾತೀತವಾಗಿ ಗ್ಯಾರೆಂಟಿಗಳನ್ನು ಕೊಡುತ್ತಿದ್ದೇವೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನವರು (JDS) ಗೃಹಲಕ್ಷ್ಮಿ ತಗೋತಿಲ್ವಾ? ಶಕ್ತಿ ಯೋಜನೆಯಡಿಯಲ್ಲಿ ಬಸ್‌ನಲ್ಲಿ ಓಡಾಡುತ್ತಿಲ್ವಾ? ಎಲ್ಲಾ ಜಾತಿಯವರಿಗೂ ಶಕ್ತಿ ತುಂಬುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಹೇಳುವ ಮಾತುಗಳು ಸತ್ಯಕ್ಕೆ ದೂರವಾದ ಮಾತುಗಳು. ಅವರು ಹೇಳುವ ಮಾತಿನಲ್ಲಿ ಸತ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಆಗ್ರಹ – ಶಿವಲಿಂಗೇಗೌಡ ಬೆಂಬಲಿಗರ ವಿರುದ್ಧ ವೇದಿಕೆಯಲ್ಲೇ ಸಿಎಂ ಗರಂ
ಹಾಸನ ಜಿಲ್ಲೆಯಲ್ಲಿ ತೆಂಗಿನಮರಗಳಿಗೆ ರೋಗ ಬಂದಿದೆ. ಎಷ್ಟೇ ಹಣ ಖರ್ಚಾದರೂ ಕೂಡ ರೋಗ ತಡೆಗಟ್ಟುವ ಕೆಲಸ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್
ಶ್ರೇಯಸ್‌ಪಟೇಲ್ ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡಿದ್ರಿ. ಶ್ರೇಯಸ್‌ಪಟೇಲ್ ಒಬ್ಬ ಪ್ರಾಮಾಣಿಕ ಯುವಕ. ಒಳ್ಳೆಯ, ಯೋಗ್ಯ ತೀರ್ಮಾನವನ್ನು ಮಾಡಿದ್ದೀರಾ. ಹಾಸನ ಜಿಲ್ಲೆಯಲ್ಲಿ ಏಳು ವಿಧಾನಸಭಾ ಸ್ಥಾನಗಳಿವೆ. ಮುಂದಿನ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆಲ್ಲಿಸಿಕೊಡುವ ಕೆಲಸ ಮಾಡಬೇಕು. ಶಿವಲಿಂಗೇಗೌಡ, ಶ್ರೇಯಸ್‌ಪಟೇಲ್ ನೇತೃತ್ವದಲ್ಲಿ ಚುನಾವಣೆ ನಡೆದರೆ ನೀವು ಅವರಿಗೆ ಆಶೀರ್ವಾದ ಮಾಡಬೇಕು ಎಂದರು.