– ವ್ಯಾಪಾರಿಗಳಿಗೆ ನೋಟಿಸ್ – ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ ಎಂದ ಸಿಎಂ
ಮೈಸೂರು: ನಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಡಿಸಿಎಂಗೆ ಸಿಎಂ ಅವಮಾನ ಆಗುವ ರೀತಿ ಮಾತಾಡಿದ್ರು ಎಂಬ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ (Siddaramaiah) ಇವತ್ತು ಡಿಕೆ ಶಿವಕುಮಾರ್ (DK Shivakumar) ಸಮ್ಮುಖದಲ್ಲೇ ಸ್ಪಷ್ಟೀಕರಣ ರೂಪದ ತಿರುಗೇಟು ನೀಡಿದ್ದಾರೆ.
ದಿಢೀರ್ ದೆಹಲಿ ಪ್ರವಾಸ ಬಗ್ಗೆಯೂ ಡಿಕೆಶಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಾಧನಾ ಸಮಾವೇಶದಲ್ಲಿ ಡಿಸಿಎಂ ಅರ್ಧಕ್ಕೆ ಎದ್ದು ಹೋಗಿದ್ದು, ಡಿಸಿಎಂ ಹೆಸರು ಹೇಳಿ ಎಂದ್ದಿದ್ದಕ್ಕೆ ಸಿಎಂ ಮನೆಯಲ್ಲಿ ಕೂತವರ ಹೆಸರು ಹೇಳೋಕೆ ಆಗಲ್ಲ ಎಂದಿದ್ದು ರಾಜಕೀಯವಾಗಿ ಬಹಳ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ (BJP) ಅವರು ಇದು ಡಿಸಿಎಂಗೆ ಆದ ಅವಮಾನ ಎಂದು ವ್ಯಂಗ್ಯದ ಧ್ವನಿಯಲ್ಲಿ ಸಹಾನುಭೂತಿ ತೋರುತ್ತಿದ್ದಾರೆ. ಇದಕ್ಕೆಲ್ಲ ಇವತ್ತು ಮೈಸೂರಿನ ಕಬಿನಿ ಜಲಾಶಯದ ಬಳಿ ಸಿಎಂ ಹಾಗೂ ಡಿಸಿಎಂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಕೂತಿರೋರಿಗೆಲ್ಲ ವೆಲ್‌ಕಮ್ ಮಾಡೋಕಾಗಲ್ಲ – ಡಿಕೆಶಿ ಹೆಸರನ್ನೇ ಹೇಳದ ಸಿಎಂ
ತಮ್ಮ ದಿಢೀರ್ ದೆಹಲಿ ಪ್ರವಾಸ ಹಾಗೂ ಸಮಾವೇಶದಿಂದ ಅರ್ಧಕ್ಕೆ ಎದ್ದು ಹೋದ ಬಗ್ಗೆ ಸ್ಪಷ್ಟೀಕರಣ ಕೊಟ್ಟ ಡಿಕೆ ಶಿವಕುಮಾರ್, ನಾನು ಪೂರ್ವ ನಿಗದಿತ ಮೀಟಿಂಗ್ ಇದ್ದ ಕಾರಣ ದೆಹಲಿಗೆ ಹೋಗಿದ್ದೆ. ನನ್ನ ಲಾಯರ್ ಭೇಟಿ ಆಗಬೇಕಿತ್ತು. ಇದು ವೈಯಕ್ತಿಕ ವಿಚಾರ. ರಾಜಕೀಯ ಚರ್ಚೆಗೆ, ಸಭೆಗೆ ನಾನು ದೆಹಲಿಗೆ ಹೋಗಿಲ್ಲ. ಬಿಜೆಪಿಗೆ ನನ್ನ ಮೇಲೆ ಯಾವಾಗಲೂ ಪ್ರೀತಿ ಜಾಸ್ತಿ ಎಂದರು. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ
ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ರನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡು ನಿನ್ನೆಯ ಘಟನೆಗೆ ಸ್ಪಷ್ಟೀಕರಣ ಕೊಟ್ಟರು. ನಾನು ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಿಲ್ಲ. ಅವರು ಸಭೆಯಲ್ಲಿ ಇಲ್ಲದ ಕಾರಣ ಅವರ ಹೆಸರು ಹೇಳಲಿಲ್ಲ ಅಷ್ಟೆ. ಇದರಲ್ಲಿ ಅವಮಾನದ ಪ್ರಶ್ನೆ ಎಲ್ಲಿಂದ ಬಂತು? ಬಿಜೆಪಿ ನನ್ನ ಮತ್ತು ಡಿಸಿಎಂ ಸಂಬಂಧ ಕೆಡಿಸಿ ಅದರ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿ ಇದ್ದಾರೆ ಅಂತ ಕಿಡಿ ಕಾರಿದರು.