5 ಲಕ್ಷ ಲಂಚ ಪಡೆಯುವಾಗ್ಲೇ ಸಿಕ್ಕಿಬಿದ್ದ ಬಿಜೆಪಿ ಶಾಸಕ – ನಾವ್ಯಾರು ತನಿಖೆಗೆ ಅಡ್ಡಿ ಬರಲ್ಲ ಎಂದ ಸಿಎಂ

1 Min Read

ಬೆಂಗಳೂರು: ಲೋಕಾಯುಕ್ತಕ್ಕೆ ಬಿಜೆಪಿ ಶಾಸಕರೇ ಸಿಕ್ಕಿಹಾಕಿಕೊಂಡಿದ್ದಾರೆ. ಅದೇನು ಅಂತ ಅವರೇ ಹೇಳಬೇಕು. ನಾವ್ಯಾರು ತನಿಖೆಗೆ ಅಡ್ಡಿ ಬರಲ್ಲ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಲೋಕಾಯುಕ್ತ ಟ್ರ್ಯಾಪ್ ವಿಚಾರಕ್ಕೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ ಏನು ಅಂತಾ ಅವರು ಹೇಳಬೇಕು ಅಲ್ವ? ಬೇರೆಯವರ ಮೇಲೆ ಲಂಚದ ಆರೋಪ ಮಾಡೋದು ಸುಲಭ. ಬಿಜೆಪಿ ಶಾಸಕರೇ ಸಿಕ್ಕಿಹಾಕಿಂಡಿದ್ದಾರೆ, ಲೋಕಾಯುಕ್ತ ತನಿಖೆ ನಡೆಸಲಿ. ತನಿಖೆಗೆ ನಾವ್ಯಾರು ಅಡ್ಡಿ ಬರಲ್ಲ. ರಾಜಕೀಯವಾಗಿ ನಾನು ಆಮೇಲೆ ಮಾತಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ:  11 ಲಕ್ಷ ಕಮಿಷನ್‌ಗೆ ಬೇಡಿಕೆ – 2 ದಿನಗಳ ಹಿಂದೆಯೇ ಆಡಿಯೋದಲ್ಲಿ ಸಿಕ್ಕಿಬಿದ್ದಿದ್ದ ಚಂದ್ರು ಲಮಾಣಿ!

Chandru Lamani

ಏನಾಗಿತ್ತು?
ಗದಗ್‌ನ ಶಿರಹಟ್ಟಿಯ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವತ್ತು 5 ಲಕ್ಷ ಕ್ಯಾಶ್ ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಎಂಎಲ್‌ಎ ಚಂದ್ರು ಲಮಾಣಿ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ ಅನ್ನೋವ್ರ ಬಳಿ 1 ಕೋಟಿ ರಸ್ತೆ ಕಾಮಗಾರಿಗೆ ಸಂಬಂಧ 1 ಪರ್ಸೆಂಟ್ ಕಮಿಷನ್‌ನಂತೆ 11 ಲಕ್ಷ ಲಂಚಕ್ಕೆ ಡೀಲ್ ಆಗಿತ್ತು ಅಂತ ತಿಳಿದು ಬಂದಿದೆ.

ಈ ಸಂಬಂಧ, ಲಕ್ಷ್ಮೇಶ್ವರ ಪಟ್ಟಣದ ಡಾ. ಚಂದ್ರು ಲಮಾಣಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೆ ಲೋಕಾಯುಕ್ತ ರೇಡ್ ಮಾಡಿತ್ತು. ಈ ವೇಳೆ, ಗುತ್ತಿಗೆದಾರ ವಿಜಯ್‌ರಿಂದ 5 ಲಕ್ಷ ಲಂಚವನ್ನ ಶಾಸಕ ಚಂದ್ರು ಲಮಾಣಿ ಅವರೇ ಸ್ವೀಕರಿಸುವಾಗ ರೇಡ್ ಮಾಡಿದ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಟೀಮ್ ರೆಡ್‌ಹ್ಯಾಂಡ್ ಆಗಿ ಹಿಡಿದಿದೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಶಾಸಕ ಡಾ.ಚಂದ್ರು‌ ಲಮಾಣಿ – ಬಿಜೆಪಿಗೆ ನುಂಗಲಾರದ ತುತ್ತು

Share This Article