ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ರೆ ಎಲ್ಲರೂ ತಪ್ಪು ಮಾಡಿದ್ದಾರೆ ಎಂದರ್ಥವಲ್ಲ: ಸಿದ್ದು

Public TV
1 Min Read

ಬೆಂಗಳೂರು: ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದರೆ ಎಲ್ಲರೂ ತಪ್ಪು ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಮೌಲ್ವಿ ಹೌದೋ, ಅಲ್ಲವೋ ಎಂಬುದು ನನಗೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಂತಹ ವಿಚಾರಗಳಿಂದ ಇನ್ನಷ್ಟು ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಶಾಂತಿ ಕದಡುವ ಪ್ರಯತ್ನ ಯಾರೂ ಮಾಡಬಾರದು. ಹುಬ್ಬಳ್ಳಿ ಗಲಭೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ನಿರಪರಾಧಿಗಳ ಮೇಲೆ ಕ್ರಮ ಬೇಡ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ, ಬಾಂಬ್ ಹಾಕೋರು ಟೋಪಿ ಹಾಕಿದವರು: ಸಿ.ಟಿ ರವಿ

HUBBALLI_ MOULVI 3

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಜಾಮೀನು ರಹಿತ ಅಪರಾಧ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈಗ ತನಿಖೆ ನಡೆಯುತ್ತಿದ್ದು, ನಿಷ್ಪಕ್ಷಪಾತವಾಗಿ ನಡೆಯಲಿ. ಆ ನಂತರ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದ್ದಾರೆ.

ಕೇಜ್ರೀವಾಲ್ ಅವರು ರಾಜ್ಯ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತೀರ್ಮಾನವನ್ನು ಜನಗಳಿಗೆ ಬಿಡೋಣ. ಈ 40 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ಕಿತ್ತು ಹಾಕಿ ಎಂದು ನಾವೂ ಹೇಳುತ್ತಿದ್ದೀವಿ. ಜನರೇ ತೀರ್ಮಾನ ಮಾಡಲಿ. ಆಪ್ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ಅದು ಕೂಡ ಬಹಳ ವರ್ಷಗಳಿಂದ ರಾಜಕೀಯದಲ್ಲಿದೆ. ದೊಡ್ಡ ಪಕ್ಷ ಅದು. ರಾಜ್ಯದಲ್ಲಿ ಅವರು ಇವತ್ತಿನವರೆಗೆ ಚುನಾವಣೆ ಎದುರಿಸಿರಲಿಲ್ಲ. ಕೇಜ್ರೀವಾಲ್ ಬಂದು ನಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ಹಾಕ್ತೀವಿ ಎಂದಿದ್ದಾರೆ. ಹಾಕಲಿ, ಜನ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್‍ಡಿಪಿಐ

Hubballi Riot

ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪರವಾಗಿ ರಾಜ್ಯದ ಚುನಾವಣೆ ಕಾರ್ಯತಂತ್ರ ರೂಪಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ವೈಯಕ್ತಿಕವಾಗಿ ಮಾಹಿತಿ ಇಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *