ಬೆಲೆ ಏರಿಕೆ ಮುಚ್ಚಿಹಾಕಲು ಹಲಾಲ್ ತರ್ತಾರೆ: ಸಿದ್ದರಾಮಯ್ಯ ಕಿಡಿ

Public TV
2 Min Read

ಬೆಂಗಳೂರು: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಬೆಲೆ ಏರಿಕೆ ವಿಚಾರವನ್ನು ಮುಚ್ಚಿ ಹಾಕಲು ಕೋಮುವಾದಿ ವಿಷಯ ತರ್ತಾರೆ. ಅದಕ್ಕಾಗಿಯೇ ಹಿಜಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಂತಹ ವಿಚಾರಗಳನ್ನು ತರುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ತೋರಿಸುತ್ತಾ ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ನಿಮಗೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

4 ಎಲೆಕ್ಷನ್ ನಲ್ಲಿ ಗೆದ್ದಿಲ್ಲವೇ ಎನ್ನುತ್ತೀರಿ. ಭಾವನಾತ್ಮಕ ವಿಚಾರಗಳು ಹಾಗೂ ಹಿಂದುತ್ವದ ವಿಚಾರಗಳನ್ನಿಟ್ಟುಕೊಂಡು ಏಕೆ ಜನರನ್ನ ದಾರಿ ತಪ್ಪಿಸುತ್ತೀರಿ? ಹಲಾಲ್ ಎಷ್ಟು ವರ್ಷಗಳಿಂದ ಮಾಡಿಕೊಂಡು ಬರ್ತಿಲ್ಲ? ನಾವು ಮರಿ ಕುಯ್ಯಲ್ಲವಾ..? ನಾವು ಅವರಿಂದ ತಗೊಂಡು ತಿಂದಿಲ್ಲವಾ..? ಅದು ಅವರ ನಂಬಿಕೆ, ಮಾಡಿಕೊಳ್ಳಲು ಬಿಡಿ ಎಂದು ಹೇಳಿದರು.

Siddaramaiah

ಗೋ ಹತ್ಯೆ ಬಿಲ್ ಜೊತೆಗೆ ಹೋದವರು ಯಾರು? ಮತಾಂತರ ನಿಷೇಧ ಕಾಯ್ದೆ ಹಿಂದೆ ಹೋದವರು ಯಾರು? ಎಂದು ಪ್ರಶ್ನಿಸಿದ ಅವರು, ನಾವು ಸೆಕ್ಯುಲರಿಸಂ ಜೊತೆ ಕಮಿಟ್ ಆದವರು, ಸಂವಿಧಾನದ ಜೊತೆಗೆ ಹೋಗುವವರು, ಹಿಜಬ್ ಹಲಾಲ್ ಏನೇ ಇರಲಿ ನಾವು ಸಂವಿಧಾನದ ಜೊತೆಗೆ ಹೋಗುತ್ತೇವೆ ರಕ್ಷಣೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮುಸಲ್ಮಾನರು ಹಲಾಲ್ ಮಾಡುವುದಾದರೆ ಮಾಡಲಿ: ಈಶ್ವರಪ್ಪ

ಹಲಾಲ್ ಎಷ್ಟು ಸಾವಿರ ವರ್ಷಗಳಿಂದ ನಡೆಯುತ್ತಿದೆ. ನಾವೂ ಜಾತ್ರೆಗಳಲ್ಲಿ ಮರಿಗಳನ್ನು ಹೊಡೆಯುತ್ತಿರಲಿಲ್ವೇ? ಹಲಾಲ್ ಮಾಂಸ ತಿನ್ನುತ್ತಿರಲಿಲ್ವೇ? ಈಗ ಏಕೆ ಅನಗತ್ಯವಾಗಿ ಮನುಷ್ಯರನ್ನ ಎತ್ತಿಕಟ್ಟುತ್ತಿದ್ದಾರೆ? ಕಾನೂನು ಸುವ್ಯವಸ್ಥೆ ಇದ್ದರೆ ಇನ್ವೆಸ್ಟ್ಮೆಂಟ್ ಬರುತ್ತೆ, ಇನ್ವೆಸ್ಟ್ಮೆಂಟ್ ಇದ್ದರೆ ಉದ್ಯೋಗ ಸಿಗುತ್ತವೆ. ದೇಶ ಹಾಗೂ ರಾಜ್ಯದ ಆರ್ಥಿಕಾಭಿವೃದ್ಧಿ ಹೆಚ್ಚಾಗುತ್ತದೆ. ಅದು ಬಿಟ್ಟು ಈ ರೀತಿ ಮಾಡುವುದರಿಂದ ಏನು ಅಭಿವೃದ್ಧಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Siddaramaiah

ಬೆಲೆ ಏರಿಕೆ ಯಾರ ಕೈಯಲ್ಲಿದೆ ಮೋದಿ ಅವ್ರೆ?:  ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ನಮ್ಮ ಕೈಯಲ್ಲಿ ಇಲ್ಲ. ಅವು ಸ್ವಾಯತ್ತ ಸಂಸ್ಥೆಗಳು ಎಂದು ಪ್ರಧಾನಿ ಹೇಳುತ್ತಾರೆ. ಹಾಗಾದರೆ ನವೆಂಬರ್ ನಿಂದ ಮಾರ್ಚ್ 10ರ ತನಕ ಏರಿಕೆ ಮಾಡಲಿಲ್ಲ..? ಪಂಚರಾಜ್ಯ ಚುನಾವಣೆಯ ವೇಳೆ ಬೆಲೆ ಏರಿಕೆಯಾಗಲಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ಪೆಟ್ರೋಲ್ ಬೆಲೆ 7 ರೂ. 20 ಪೈಸೆ, ಎಲ್‌ಪಿಜಿ ಸಿಲಿಂಡರ್ ದರ 50 ರೂ. ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಇಲ್ಲಿವರೆಗೆ 18 ರೂ. 70 ಪೈಸೆ ಪೆಟ್ರೋಲ್ ಮೇಲಿನ ಸುಂಕ ಹಾಗೂ 18 ರೂ.30 ಪೈಸೆ ಡಿಸೇಲ್ ಮೇಲಿನ ಸುಂಕವನ್ನು ಹೆಚ್ಚಿಸಿದ್ದಾರೆ ಈಗ ಬೆಲೆ ಏರಿಕೆ ಯಾರ ಕೈಯಲ್ಲಿದೆ ಮೋದಿ ಅವರೇ ಎಂದು ಕುಟುಕಿದರು.

ಬೆಲೆ ಏರಿಕೆ ವಿಚಾರದಲ್ಲಿ ಬಿಜೆಪಿ – ಕಾಂಗ್ರೆಸ್ ಸರ್ಕಾರಗಳ ಹೋಲಿಕೆ ಮಾಡುವಾಗ ಮೂರು ಬಾರಿ ನರಸಿಂಹರಾವ್ ಹೆಸರು ಹೇಳಿದ ಸಿದ್ದರಾಮಯ್ಯ ಬಳಿಕ ಮನಮೋಹನ್ ಸಿಂಗ್, ಮನಮೋಹನ್ ಸಿಂಗ್ ಎಂದು ಸರಿಪಡಿಸಿಕೊಂಡರು.

 

Share This Article
Leave a Comment

Leave a Reply

Your email address will not be published. Required fields are marked *