ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ

Public TV
2 Min Read

ಮಂಡ್ಯ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 100% ಗೆಲ್ತಾರೆ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಬಹುತೇಕರು ಕಾಂಗ್ರೆಸ್ ಗೆ ಸೇರುತ್ತಾರೆ. ಯಾರು ಸೇರುತ್ತಾರೆ ಎಂದು ನಾನು ಈಗಲೇ ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಗೊತ್ತಾಗುತ್ತದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದಿಂದ ಮೈತ್ರಿ ನಿರಾಕರಣೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗ್ತಾರೆ. ಸ್ಥಳೀಯ ನಾಯಕರಿಗೆ ಇನ್ ಡೈರೆಕ್ಟ್ ಆಗಿ ಹೇಳಿ ಕೊಟ್ಟಿದ್ದಾರೆ ಎಂದು ಜೆಡಿಎಸ್ ನಡೆ ಬಗ್ಗೆ ವ್ಯಂಗ್ಯವಾಡಿದರು. ಬಾದಾಮಿಯಲ್ಲಿ ಚಿಮ್ಮನಕಟ್ಟಿ ಅಸಮಾಧಾನ ಬಗ್ಗೆ ಮಾತನಾಡಿದ ಅವರು, ಅದಕ್ಕೆ ನಿನ್ನೆಯೇ ಉತ್ತರ ಕೊಡಬೇಕು ಅಂತಿದ್ದೆ. ಆದರೆ ರಾಜಕೀಯ ಭಾಷಣ ಎಂದು ಸುಮ್ಮನಿದ್ದೆ. ಇನ್ನೊಂದು ದಿನ ಅದಕ್ಕೆ ಉತ್ತರ ಕೊಡ್ತೀನಿ ಎಂದು ಸುಮ್ಮನಾದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

ಮಂಡ್ಯ ಅಭಿವೃದ್ಧಿಗೆ ಕಾಂಗ್ರೆಸ್ ಬಿಡಲಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅವರ ಕೈ ಹಿಡಿದುಕೊಂಡಿದ್ವ? ಏಳಕ್ಕೆ ಏಳು ಶಾಸಕರಿದ್ದಿದ್ದು ಅವರೇ. ಆದರೂ ಮಂಡ್ಯವನ್ನ ಅವರು ಏಕೆ ಅಭಿವೃದ್ಧಿ ಮಾಡಲಿಲ್ಲ? ಎಂದು ಪ್ರಶ್ನಿಸಿದರು. ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ ಅವರು, ಜನ ಬಯಸಿದ್ರೆ ಶಾಸಕ ಆಗಬೇಕು. ಆದರೆ ಒಂದೇ ಫ್ಯಾಮಿಲಿ ಸುತ್ತ ಗಿರಕಿ ಹೊಡೆಯಬಾರದು ಎಂದು ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ಟೀಕಿಸಿದರು.

ನನಗೆ ಎಲ್ಲರೂ ಒಳ್ಳೆಯ ಸ್ನೇಹಿತರೇ. ವೈಯಕ್ತಿಕವಾಗಿ ಯಾರ ಮೇಲು ನನಗೆ ದ್ವೇಷವಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಯಿ ಅವರ ಮೇಲು ನನಗೆ ದ್ವೇಷವಿಲ್ಲ. ನಮ್ಮ ನಡುವೆ ಸಿದ್ಧಾಂತದ ಭಿನ್ನಾಭಿಪ್ರಾಯ ಇದೆ. ಈ ವಿಚಾರದಲ್ಲಿ ನಾನು ತೀವ್ರವಾಗಿ ವಿರೋಧ ಮಾಡುತ್ತೇನೆ ಎಂದು ಸ್ಪಷ್ಟನೆಯನ್ನು ನೀಡಿದರು. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವುದು ಸತ್ಯ. ನಾನು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದು. ಇವತ್ತಿನವರೆಗೆ ನನಗೆ ರಾಜಕೀಯದಲ್ಲಿ ಜಾತಿ ಭೇದ ಮಾಡಿ ಗೊತ್ತಿಲ್ಲ. ಜಾತಿ ಭೇದವನ್ನು ಯಾರು ಮಾಡಬಾರದು ಎಂಬುದೇ ನನ್ನ ಸಿದ್ಧಾಂತದ ಸೆಕ್ಯುಲರಿಸಂ ಮತ್ತು ನಮ್ಮ ಸಂವಿಧಾನದ ಸೆಕ್ಯುಲರಿಂ ಆಗಿದೆ. ಜಾತಿ ವ್ಯವಸ್ಥೆ ಹೋಗಿದೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ರಾಜಕಾರಣದಲ್ಲಿ ನಾನು ಜಾತಿ ಮಾಡಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *