ಬರ ಪರಿಹಾರ ನೀಡಿ- ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ

Public TV
1 Min Read

ಮೈಸೂರು: ದೆಹಲಿಗೆ (Delhi) ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆ ಕುರಿತು ಮಾತುಕತೆ ನಡೆಸಿದ್ದಾರೆ.

ಮಂಗಳವಾರ (ಡಿ.19) ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ (Siddaramaiah) ಅವರು, ಪ್ರಧಾನಿಗೆ ಶಾಲು ಹೊದಿಸಿ ಶುಭ ಕೋರಿದ್ದಾರೆ. ಬಳಿಕ ಕರ್ನಾಟಕ ಸರ್ಕಾರದ ಮನವಿ ಪತ್ರ ನೀಡಿ, ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: UPI ಸಾಧನೆ – 5 ವರ್ಷದಲ್ಲಿ 92 ಕೋಟಿಯಿಂದ 8,375 ಕೋಟಿ ವಹಿವಾಟು ಏರಿಕೆ

ಸೋಮವಾರವೇ (ಡಿ.18) ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಭೇಟಿ ನಂತರ ಮಲ್ಲಿಕಾರ್ಜುನ ಖರ್ಗೆ (MalliKarjun Kharge) ಅವರ ಕಚೇರಿಗೆ ತೆರಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಶುರು – ಗುರುವಾರ ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ

Share This Article