ಅನೇಕ ಬಡಾವಣೆಗಳಿಗೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಅನೇಕ ಬಡಾವಣೆಗಳಲ್ಲಿ ನೀರು ತುಂಬಿಕೊಂಡು ಬೋಟ್ (Boat) ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಇಂದು ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೋಮವಾರ ಹಾಗೂ ಮಂಗಳವಾರ ಜಾಸ್ತಿ ಮಳೆ ಬಿದ್ದಿದೆ. ರಸ್ತೆಗಳಲ್ಲಿ, ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಸುಮಾರು 12 ಅಡಿ ನೀರು ಇತ್ತು. ಈಗ 4 ಅಡಿ ನೀರು ಇದೆ. ಮನೆಯೆಲ್ಲಾ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದರು. ಇದನ್ನೂ ಓದಿ: ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ

ನಮ್ಮ ಸರ್ಕಾರದಲ್ಲಿ ಇರುವಾಗ ರಾಜಕಾಲುವೆಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದೇವೆ. ಈಗಿನ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನಮ್ಮ ಸರ್ಕಾರದಲ್ಲಿ 1953 ಒತ್ತುವರಿ ಜಾಗವನ್ನು ನಾವು ಐಡೆಂಟಿಟಿ ಮಾಡಿದ್ದೇವೆ. 1,300 ಒತ್ತುವರಿ ಜಾಗವನ್ನು ತೆರವು ಮಾಡಿದ್ದೀವಿ. 653 ಒತ್ತವರಿ ಜಾಗವನ್ನು ಇನ್ನೂ ಉಳ್ಕೊಂಡಿವೆ. ನಮ್ಮ ಸರ್ಕಾರ (Government) ಬಿದ್ಹೋಯ್ತು. ನಾವು ಮುಂದುವರಿಸಲಿಲ್ಲ. ಈ ಬಿಜೆಪಿ (BJP) ಸರ್ಕಾರ ಇದನ್ನು ಮುಂದುವರಿಸಿದರೆ ಈ ಪರಿಸ್ಥಿತಿ ಆಗ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

ಇಂದಿನ ಸ್ಥಿತಿಗೆ ಹಿಂದಿನ ಸರ್ಕಾರ ಕಾರಣ ಅಂತಾ ಸಿಎಂ ಹೇಳ್ತಾರೆ. ಅವರು ಬಂದು ಮೂರು ವರ್ಷ ಆಯ್ತಲ್ಲ ಏನು ಮಾಡಿದ್ದಾರೆ ಹೇಳಲಿ. ಎಷ್ಟು ಒತ್ತುವರಿ ತೆರವು ಮಾಡಿದ್ದೀವಿ ಅನ್ನೋದನ್ನ ಹೇಳಲಿ. ಎಟಿ ರಾಮಸ್ವಾಮಿ (AT Ramaswamy) ವರದಿ ಮೇಲೆ ಒತ್ತುವರಿ ತೆರವು ಮಾಡಿದ್ವಿ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹಿಂದಿನ ಸರ್ಕಾರದ ಬಗ್ಗೆ ಹೇಳ್ತಾರೆ. ಬೆಂಗಳೂರನ್ನು ಅನಗತ್ಯವಾಗಿ ಹೆಚ್ಚು ಮಾಡಿಬಿಟ್ರು. 110 ಹಳ್ಳಿಗಳನ್ನು ಸೇರಿಸಿಬಿಟ್ರು. ಒಂದೂವರೆ ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಒಬ್ಬರೇ ಕಮಿಷನರ್ ಹೇಗೆ ನಿರ್ವಹಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಒತ್ತುವರಿ ತೆರವಿಗೆ ಕೂಡ ಬಿಜೆಪಿ ವಿರೋಧ ಮಾಡಿದ್ರು. ಶಾಸಕ ಸುರೇಶ್ ಕುಮಾರ್ (Suresh Kumar) ನೇತೃತ್ವದಲ್ಲಿ ವಿರೋಧ ಮಾಡಿದ್ರು. ಇವತ್ತು ನಾಗರೀಕರಿಗೆ ಸಾಕಷ್ಟು ತೊಂದರೆಯಾಗಿದೆ. ಅವರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಏನು ಮಾಡ್ತಿದ್ದಾರೆ. ಬೈರತಿ ಬಸವರಾಜು, ಸತೀಶ್ ರೆಡ್ಡಿ ಏನು ಮಾಡ್ತಿದ್ದಾರೆ. 17 ವರ್ಷದಲ್ಲಿ ಐದು ವರ್ಷ ನಾವಿದ್ವಿ ಉಳಿದ ಕಾಲ ಅವರೇ ಇದ್ದದ್ದು ಅಲ್ವಾ. ಜನರ ದಿಕ್ಕು ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಒತ್ತುವರಿ ಆಗಲು ಯಾರು ಕಾರಣ..? ಶಾಸಕರೇ ಅಲ್ವಾ. ವಿಧಾನಸಭೆಯಲ್ಲಿ ಇದನ್ನು ನಾನು ಪ್ರಸ್ತಾಪ ಮಾಡುತ್ತೇನೆ. ಬ್ರಾಂಡ್ ಬೆಂಗಳೂರು ಹೆಸರಿಗೆ ಧಕ್ಕೆಯಾಗ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಒಂದು ಖ್ಯಾತಿ ಇದೆ. ಅದನ್ನು ಉಳಿಸಿಕೊಳ್ಳೊ ಪ್ರಯತ್ನ ನಾವು ಮಾಡಬೇಕು ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *