ಕುಮಾರಸ್ವಾಮಿ ಅಲ್ಲ, ಯಾರೇ ಟಾರ್ಗೆಟ್ ಮಾಡಿದರೂ ನಾನು ಹೆದರಲ್ಲ: ಸಿದ್ದರಾಮಯ್ಯ

By
2 Min Read

ಕಲಬುರಗಿ: ಕುಮಾರಸ್ವಾಮಿ ಅಲ್ಲ, ಯಾರೇ ಟಾರ್ಗೆಟ್ ಮಾಡಿದರೂ ನಾನು ಹೆದರಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಡಕ್ ಆಗಿ ಮಾತನಾಡಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಯಾವಾಗ ಬಂದರೂ ನಾವು ತಯಾರಿದ್ದೇವೆ. ಜಿಲ್ಲಾ ಪಂಚಾಯತ್ ಚುನಾವಣೆಯನ್ನೇ ಮಾಡದವರು ವಿಧಾನಸಭೆ ಚುನಾವಣೆ ಮಾಡುತ್ತಾರಾ? ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲ್ಲ ಎಂದರು. ಇದನ್ನೂ ಓದಿ:  ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಈಗಲ್‍ಟನ್ ರೆಸಾರ್ಟ್‍ಗೆ ದಂಡ ಹಾಕಿದ್ದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಕೋರ್ಟ್‍ನಲ್ಲಿ ಕೂಡಾ ನಮ್ಮ ತೀರ್ಮಾನ ಎತ್ತಿಹಿಡಿದಿದೆ. ಸ್ಕೈರ್‍ಪಿಟ್ ಲೆಕ್ಕದಲ್ಲಿ 982 ಕೋಟಿ ಆಗಿತ್ತು. ಆದರೀಗ ಕುಮಾರಸ್ವಾಮಿ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಕುಮಾರಸ್ವಾಮಿ ಅಲ್ಲ, ಯಾರು ಟಾರ್ಗೆಟ್ ಮಾಡಿದರೂ ನಾನು ಹೆದರಲ್ಲ. ನನ್ನ ಕಂಡರೆ ಅವರಿಗೆ ಭಯ. ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಾರೆ ಎಂದರು.

ಕಾಂಗ್ರೆಸ್‍ನಲ್ಲಿ ನಾಯಕತ್ವವಿಲ್ಲ ಎಂಬ ಟೀಕೆ ಕುರಿತು ಮಾತನಾಡಿ, 1980ರಲ್ಲಿ ವಾಜಪೇಯಿ, ಅಡ್ವಾಣಿ ಇದ್ದರೂ ಬಿಜೆಪಿ ಕೇವಲ ಎರಡು ಸ್ಥಾನ ಗೆದ್ದಿದ್ದರು ಎಂದರು. ಇದೇ ವೇಳೆ ಕಾಂಗ್ರೆಸ್‍ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಇದೇ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ಪತ್ರ ಬರೆದಿದ್ದರು. ಯತ್ನಾಳ್, ಸರ್ಕಾರದ ವಿರುದ್ಧ ಮಾತನಾಡಿಲ್ವಾ? ಅದು ಭಿನ್ನಾಭಿಪ್ರಾಯ ಅಲ್ವಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ: ಯಡಿಯೂರಪ್ಪರನ್ನೇ ತಗೆದಿದ್ದಾರಲ್ವಾ? ಆಗ ಅವರೇ ಅತ್ತಿಲ್ವಾ? ಜೈಲಿಗೆ ಹಾಕುತ್ತೇವೆ ಅಂತ ಹೆದರಿಸಿದರಲ್ಲ. ಮೊದಲೇ ಯಡಿಯೂರಪ್ಪನವರಿಗೆ ಎರಡು ವರ್ಷದ ಅವಧಿಗೆ ಮಾತ್ರ ಸಿಎಂ ಮಾಡಿದ್ದರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

ರಾಜ್ಯದಲ್ಲಿ ಬಿಜೆಪಿ ಭ್ರಷ್ಟ ಸರ್ಕಾರವಿದೆ. ಕಾಂಗ್ರೆಸ್ ಬಿಟ್ಟು ಹೋಗಿರುವ ಶಾಸಕರು ಮತ್ತೆ ಬಂದರೆ ಅವರನ್ನು ತೆಗೆದುಕೊಳ್ಳುವುದಿಲ್ಲ. ಮೋದಿ ಅವರು ಕರ್ನಾಟಕ ಟಾರ್ಗೆಟ್ ಮಾಡಿದ್ದರು. ಅವರು ಸೋಲುತ್ತಾರೆ. ಜನ ಸಾಧನೆ ಮೇಲೆ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *