ಟಿಪ್ಪು ಜಯಂತಿ ಮಾಡಿ ಹತ್ತಾರು ಕೊಲೆಗಳಿಗೆ ದಾರಿ ಮಾಡ್ಕೊಟ್ಟಿದ್ದು ಸಿದ್ದರಾಮಯ್ಯ: ಪ್ರತಾಪ್ ಸಿಂಹ

Public TV
2 Min Read

ಮೈಸೂರು: ಇಲ್ಲಿನ ಮಹಾರಾಜರಿಗೆ ಉಪಕೃತರಾಗಿರಬೇಕಾದ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆಗೆ ಅನುವು ಮಾಡಿಕೊಡುವ ಮೂಲಕ ಹತ್ತಾರು ಕೊಲೆಗಳಿಗೆ ದಾರಿ ಮಾಡಿಕೊಟ್ಟರು ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ ಎಸ್‌ಡಿಪಿಐ, ಕೆಎಫ್‌ಡಿ ಅವರು ನಿಮ್ಮ ಶಾಸಕರೇ ಆದ ತನ್ವೀರ್ ಸೇಠ್ ಅವರ ಕುತ್ತಿಗೆ ಕಡಿದಿದ್ದನ್ನೂ ನಾವು ನೋಡಿದ್ದೇವೆ. ರಾಜು, ಪ್ರವೀಣ್ ಪೂಜಾರಿ, ಕುಟ್ಟಪ್ಪ ಸೇರಿದಂತೆ ಸಾಕಷ್ಟು ಹಿಂದೂ ಕಾರ್ಯಕರ್ತರ ಹತ್ಯೆಗಳು ಆಗಿವೆ. ರಾಜಕೀಯಕ್ಕಾಗಿ ಇದೇ ರೀತಿ ಜಿಹಾದಿ ಮನಸ್ಥಿತಿ ಮುಂದುವರಿಸಿದರೆ ಭಾರತ ಮತ್ತೊಂದು ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ರೀತಿ ಪ್ರತ್ಯೇಕವಾಗುತ್ತದೆ. ಅಧಿಕಾರ ಶಾಶ್ವತ ಅಲ್ಲ, ಅಧಿಕಾರಕ್ಕಾಗಿ ಶಾಶ್ವತವಾಗಿ ಇರಬೇಕಾದ ಭಾರತವನ್ನು ಹಾಳು ಮಾಡಬೇಡಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ: ಉಮೇಶ್ ಕತ್ತಿ

siddu pratap simha

ಕೋಲಾರದಲ್ಲಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, 2015ರಲ್ಲಿ ಎಸ್‌ಡಿಪಿಐ, ಕೆಎಫ್‌ಡಿ ಮೇಲಿನ ಪ್ರಕರಣಗಳನ್ನು ವಾಪಸ್ ತೆಗೆದು ಹಾಕಿದರು. ಕ್ರಿಮಿನಲ್‌ಗಳನ್ನು ರಾಜಾರೋಷವಾಗಿ ಓಡಾಡಲು ಬಿಟ್ಟರು. ಆಗಿನಿಂದಲೂ ಸರಣಿ ಹತ್ಯೆಗಳಾದವು. ನಂತರ ಟಿಪ್ಪು ಜಯಂತಿ ಮಾಡಿ ತಾಲಿಬಾನಿ ಮನಸ್ಥಿತಿಗಳಿಗೆ ಪ್ರೋತ್ಸಾಹ ಕೊಟ್ಟರು. ಈಗ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ವ್ಯಾಪರದ ವಿರುದ್ಧ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಜಬ್ ವಿಚಾರದಲ್ಲಿ ನ್ಯಾಯಾಲಯದ ವಿರುದ್ಧ ಹೋದವರು ನಮ್ಮದು ತಪ್ಪಾಯಿತು ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯ ಈ ರೀತಿ ಚಿತಾವಣೆ ಕೊಡೊದು ನಿಲ್ಲಿಸಬೇಕು. ಅಲ್ಲಿಯವರೆಗೂ ಇಂತಹ ಅಭಿಯಾನಗಳು ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

PRATHAP SIMHA

ಹಿಂದೂಸ್ ನೆವರ್ ಆಕ್ಟ್, ಓನ್ಲಿ ರಿಯಾಕ್ಟ್: ಹಿಜಬ್ ಸಮಸ್ಯೆ ಬಂದಾಗಲೇ ಮಕ್ಕಳಿಗೆ ಶಾಲೆಗೆ ಹೋಗುವಂತೆ ಸಿದ್ದರಾಮಯ್ಯ ಬುದ್ಧಿ ಹೇಳಬೇಕಿತ್ತು. ಆಗ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಹಿಂದೂಗಳು ಯಾವತ್ತೂ ಈ ರೀತಿ ವಿಚಾರ ಕೈಗೆತ್ತಿಕೊಂಡಿರಲಿಲ್ಲ. ಹೈಕೋರ್ಟ್‌ಗೆ ಮುಸ್ಲಿಮರು ಬೆಲೆ ಕೊಡಲಿಲ್ಲ, ಅದಕ್ಕಾಗಿ ಈ ರಿಯಾಕ್ಷನ್ ಆಗಿದೆ. ಹಿಂದೂಸ್ ನೆವರ್ ಆಕ್ಟ್, ಓನ್ಲಿ ರಿಯಾಕ್ಟ್ ಎಂದ ಅವರು, ಕಿಡಿ ಹಚ್ಚುವ ಕೆಲಸ ಯಾರು ಮಾಡಿದರು ಎಂಬುದನ್ನು ಮುಸ್ಲಿಮರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *