ಸಿದ್ದರಾಮಯ್ಯಗೆ ಎಡಗೈ ನೋವು

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಎಡಗೈ ನೋವು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು (Doctor) ಸಿದ್ದರಾಮಯ್ಯ ಮನೆಗೆ ಆಗಮಿಸಿ ಪರೀಕ್ಷೆ ನಡೆಸಿದರು.

ರಾಜ್ಯ ವಿಧಾನ ಸಭಾ ಚುನಾವಣೆಗೆ (Election) ತೆರೆ ಬಿದ್ದಿದೆ. ಆದರೆ ನಿರಂತರ ಪ್ರಚಾರ, ಜನರ ನಡುವೆ ಓಡಾಟ ನಡೆಸಿದ ಹಿನ್ನೆಲೆ ಸಿದ್ದರಾಮಯ್ಯ ಅವರ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೇ ವಿಶ್ರಾಂತಿ ಸಿಗದ ಹಿನ್ನೆಲೆ ಕೊಂಚ ಬಳಲಿದ್ದಾರೆ. ಸಿದ್ದರಾಮಯ್ಯ ಅವರ ಎಡಗೈ ಊದಿಕೊಂಡಿದ್ದು, ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದಾರೆ ಡಿಕೆ ಶಿವಕುಮಾರ್

ಈ ಬಗ್ಗೆ ಸಿದ್ದರಾಮಯ್ಯ ಖಾಸಗಿ ವೈದ್ಯ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ ಕೈ ಊತ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು 15 ದಿನ ರೆಸ್ಟ್ ಬೇಕು. Viral Herpes ಇನ್ಫೆಕ್ಷನ್ ನಿಂದ ಕೈ ಊತ ಕಾಣಿಸಿಕೊಂಡಿದೆ. ಒತ್ತಡದಿಂದ ಈ ಇನ್ಫೆಕ್ಷನ್ ಕಾಣಿಸಿಕೊಂಡಿರೋದು. ಇದನ್ನ ಹೊರತುಪಡಿಸಿ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. 15 ದಿನ ರೆಸ್ಟ್ ಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಿಡ್ನಿ ಸಮಸ್ಯೆ – ಸಿ.ಟಿ ರವಿ ಆಸ್ಪತ್ರೆಗೆ ದಾಖಲು

Share This Article