ಹುಬ್ಬಳ್ಳಿ: ಸಿದ್ದರಾಮಯ್ಯ ಮಾಜಿ ಸಿಎಂರಂತೆ ವರ್ತನೆ ಮಾಡೋದು ಬಿಟ್ಟು ಪುಂಡ, ಪೋಕರಿ, ಸಾಮಾನ್ಯ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ. ಅವರು ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ಚಡ್ಡಿ ಹಾಕಿರುವ ಆರ್‌ಎಸ್‌ಎಸ್ ಕಾರ್ಯಕರ್ತರಿಂದಲೇ ದೇಶ ಒಗ್ಗಟ್ಟಾಗಿ ಉಳಿದಿದೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಅಲ್ಪಸಂಖ್ಯಾತರ ವೋಟು ಪಡೆಯಬಹುದು ಎಂದುಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗು ಬಾಣವಾಗುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು: ಹೆಚ್. ವಿಶ್ವನಾಥ್ ಕಿಡಿ
ಪದೇ ಪದೇ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಸಿದ್ದುಗೆ ಉಳಿಗಾಲವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ. ಸಿದ್ದರಾಮಯ್ಯನವರು ಇದನ್ನು ಅರಿತು ಮಾತನಾಡಬೇಕು. 5 ವರ್ಷ ಸಿಎಂ ಆಗಿದ್ದವರ ಸಂಸ್ಕೃತಿ ಇದಲ್ಲ ಎಂದರು. ಇದನ್ನೂ ಓದಿ: ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು: ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ವಿಜಯೇಂದ್ರ