ಸಿದ್ದರಾಮಯ್ಯ‌ ಕಾಮನ್‌ಸೆನ್ಸ್ ಇಲ್ಲದ ಸಿಎಂ: ಆರ್.ಅಶೋಕ್ ತಿರುಗೇಟು

Public TV
1 Min Read

ಬೀದರ್: ಎನ್‌ಡಿಆರ್‌ಎಫ್ ಪರಿಹಾರಕ್ಕಾಗಿ ಸರ್ಕಾರ ಸುಪ್ರೀಂನಲ್ಲಿ ಕೇಸ್ ಹಾಕಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಿದ್ದರಾಮಯ್ಯನವರ (Siddaramaiah) ಈ ನಡೆ ಒಳ್ಳೆಯದಲ್ಲ ಎಂದು ಬೀದರ್‌ನಲ್ಲಿ ಸಿಎಂ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಗುಡುಗಿದರು.

ಸಿದ್ದರಾಮಯ್ಯ‌ ಕಾಮನ್‌ಸೆನ್ಸ್ ಇಲ್ಲದ ಸಿಎಂ. ಮೇ‌ ತಿಂಗಳಲ್ಲಿ ಬರಗಾಲ ಬಂದರೂ ಮೂರು ತಿಂಗಳು ಬಿಟ್ಟು ಘೋಷಿಸಿದ್ದು ಯಾಕೆ? ಮೂರು ತಿಂಗಳೇನು ಕತ್ತೆ ಕಾಯ್ತಿದ್ರಾ? 3 ತಿಂಗಳು ವಿಳಂಬ ಮಾಡದೇ ಇದ್ದಿದ್ರೆ ಕೇಂದ್ರ ಸರ್ಕಾರ ಪರಿಹಾರ ಹಣ ಪಡೆಯಬಹುದಿತ್ತಲ್ಲಾ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಮರಳಿ ‘ಕೈ’ ಹಿಡಿದು ಮತ್ತೆ ಗೆದ್ದ ಒಡೆಯರ್!

ಗ್ಯಾರಂಟಿ ಯೋಜನೆಗಳಿಗೆ ಹಣ ಕೊಟ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀದಿಗೆ ಬೀಳುತ್ತೆ. ಬೊಮ್ಮಾಯಿ 25 ಸಾವಿರ ಕೋಟಿ ರೂ‌. ಉಳಿತಾಯ ಬಜೆಟ್‌ನಿಂದ ಸರ್ಕಾರ ಬದುಕಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಆರು ತಿಂಗಳ ಹಿಂದೆಯೇ ಬೀದಿಗೆ ಬರುತ್ತಿದ್ದರು ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುತ್ತಾರೆ ಅಂತಾ ಹೇಳಿದ್ರು. ಆದರೆ ಅವರು ಸೋತರೆ ಮಂತ್ರಿ ಸ್ಥಾನ ಹೋಗಲಿದೆ ಎಂಬ ಟಾಸ್ಕ್ ಕೊಟ್ಟಿದ್ದರು. ಹೀಗಾಗಿ ಬೀದರ್‌ನಿಂದ ಚಾಮರಾಜನಗರದವರೆಗೂ ಒಬ್ಬ ಮಂತ್ರಿಯೂ ಸ್ಪರ್ಧಿಸಲಿಲ್ಲ. ಕಾಂಗ್ರೆಸ್‌ಗೆ ವಿಧಿ ಇರದೇ, ಗತಿ ಇಲ್ಲದೇ ಮಂತ್ರಿ‌ ಮಕ್ಕಳಿಗೆ ಮತ್ತು ಸೊಸೆಯಂದಿರಿಗೆ ಟಿಕೆಟ್ ಕೊಟ್ಟಿದ್ದು. ಕಾಂಗ್ರೆಸ್ ಯೋಗ್ಯತೆಗೆ ಯಾರು ಕಾರ್ಯಕರ್ತರೇ ಸಿಗಲಿಲ್ವಾ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

Share This Article