ಕಾಂಗ್ರೆಸ್ ಅವಮಾನಿಸ್ತಿದೆ ಅಂದ ಬೆನ್ನಲ್ಲೇ ಸಿಎಂರಿಂದ ದೇವೇಗೌಡರಿಗೆ ಏಕವಚನ ಪ್ರಯೋಗ!

Public TV
1 Min Read

ಚಿತ್ರದುರ್ಗ: ಮಾಜಿ ಪ್ರಧಾನಿಯವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿಯವರು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಸಿಎಂ ಅವರು ದೇವೇಗೌಡ ಅವರಿಗೆ ಏಕವಚನ ಬಳಕೆ ಮಾಡಿದ್ದಾರೆ.

ಮೊಳಕಾಲ್ಮೂರಿನಲ್ಲಿ ಮಾತಾಡಿದ ಅವರು, ಯಾವ ಪಕ್ಷಕ್ಕೂ ಬಹುಮತ ಬರದಿರಲಿ ಅಂತ ಜೆಡಿಎಸ್ ಕಾದಿದೆ. ಈ ಹಿಂದೆ ಬಿಜೆಪಿ ಜೊತೆ ಅಧಿಕಾರ ಮಾಡುವುದಾದರೆ ನನ್ನ ಹೆಣದ ಮೇಲೆ ಅಂತಾ ದೇವೇಗೌಡ ಹೇಳಿದ್ದ ಅಂದ್ರು.

ಎಲ್ಲಾ ಕಡೆ ಜೆಡಿಎಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿವೆ. ಆದ್ರೆ ಅವರಪ್ಪನಾಣೆ ಕುಮಾರಸ್ವಾಮಿ ಆಗಲಿ ಯಡಿಯೂರಪ್ಪ ಆಗಲಿ ಸಿಎಂ ಆಗಲ್ಲ. ರಾಮುಲುಗೆ ಕನ್ನಡವೇ ಸರಿಯಾಗಿ ಬರಲ್ಲ. ಎಲ್ಲೋದಿದ್ರೋ ಏನೋ ಅಂತ ವ್ಯಂಗ್ಯ ಮಾಡಿದ್ರು.

ಮನ್ ಕೀ ಬಾತ್ ದೇಶದ ಜನರ ಹೊಟ್ಟೆ ತುಂಬಿಸಲ್ಲ. ಜನರಿಗೆ ಕಾಮ್ ಕಿ ಬಾತ್ ಬೇಕು. ಇತಿಹಾಸದಲ್ಲೇ ಮೋದಿಯಂತ ಮಹಾ ಸುಳ್ಳುಗಾರ ಇನ್ನೊಬ್ಬರಿಲ್ಲ ಅಂತಾ ಟೀಕಿಸಿದ್ರು. ಇನ್ನು ನಾಯಕನಹಟ್ಟಿಯಲ್ಲಿ ಭಾಷಣ ಮಾಡಿದ ಸಿಎಂ ಇಬ್ರಾಹಿಂ, ತಮ್ಮದೇ ಶೈಲಿಯಲ್ಲಿ ಎಕ್ಕಡುನ್ನಾವುರಾ ಜನಾರ್ದನ ರೆಡ್ಡಿ ಅಂತಾ ಪ್ರಶ್ನಿಸಿ ಲೇವಡಿ ಮಾಡಿದ್ರು.  ಇದನ್ನೂ ಓದಿ; ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

ಇತ್ತೀಚೆಗೆ ಉಡುಪಿ ಸಮಾವೇಶದಲ್ಲಿ ಮಾತಾಡಿದ್ದ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದರು. ಅಲ್ಲದೇ ಇದೇ ವೇಳೆ ಕಾಂಗ್ರೆಸ್ ಮಾಜಿ ಪ್ರಧಾನಿಯನ್ನು ಅವಮಾನಿಸ್ತಿದೆ ಅಂತಾ ಆರೋಪಿಸಿದ್ರು. ಮೋದಿಯವರ ಈ ಆರೋಪದ ಬೆನ್ನಲ್ಲೇ ಸ್ವತಃ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದು, ಟೀಕಿಸೋ ಭರದಲ್ಲಿ ದೇವೇಗೌಡರ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗ ಪ್ರಧಾನಿಯಾದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿಗಿಲ್ಲ- ಮೋದಿಯನ್ನು ಹೊಗಳಿ ಸಿಎಂ ತೆಗಳಿದ ಮಾಜಿ ಪ್ರಧಾನಿ

Share This Article
Leave a Comment

Leave a Reply

Your email address will not be published. Required fields are marked *