ಮೈಸೂರು: ಸಿದ್ದರಾಮಯ್ಯ ಗೆ ಬಜೆಟ್ ಮಂಡಿಸಲು ಯಾವುದೇ ಹಕ್ಕಿಲ್ಲ, ಆದರೂ ಮಂಡಿಸುತ್ತಾರೆ. ಕಾರಣ ಸಿದ್ದರಾಮಯ್ಯರಿಗೆ ಯಾವುದೇ ಕಾನೂನು ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ನಂತರ ಜಲಪ್ರಳಯವಾಗಲಿ ಮತ್ತು ನನ್ನ ನಂತರ ಯಾರಿಗೂ ಏನೂ ಇರಬಾರದು ಅನ್ನೋ ಸಿಎಂ ಮನಃಸ್ಥಿತಿ ಎಂತಹ ಕಲ್ಲು ಹೃದಯಿಗಳಿಗೂ ಇರುವುದಿಲ್ಲ. ಅಲ್ಪಸಂಖ್ಯಾತರ ಮುಂದೆ ಸಿಎಂ ಬರೀ ಬುಡುಬುಡಿಕೆ ಅಲ್ಲಾಡಿಸುತ್ತಿದ್ದಾರೆ ಅಷ್ಟೇ, ಮುಸ್ಲಿಂ ಗುರುಗಳನ್ನು ರಾತ್ರೋರಾತ್ರಿ ಭೇಟಿ ಮಾಡುವ ಅಗತ್ಯವೇನಿತ್ತು. ಹಗಲು ಹೊತ್ತು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಬಾರದಾ ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.
ಕೇಂದ್ರದ ಬಜೆಟ್ ಮಂಡನೆಯ ಬಗ್ಗೆ ಮಾತನಾಡಿದ ಅವರು, ಇದು ಭಾರತ ದೇಶದ ಬಜೆಟ್, ಗಣಪತಿ ಹಬ್ಬದಲ್ಲಿ ಲೆಕ್ಕ ಕೊಡೋ ಬಜೆಟ್ ಅಲ್ಲ. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ವೇತನ ಹೆಚ್ಚಳ ಮಾಡಿರುವುದು, ದೇಶದಲ್ಲಿ ಬೆಲೆ ಹೆಚ್ಚಾದಂತೆ ಸಂಬಳ ಹೆಚ್ಚಾಗುತ್ತೆ ಅನ್ನುವ ಹಾಗಿದೆ. ಹಾಗಿದ್ರೆ ರೈತರಿಗೆ ಬೆಲೆ ಕೊಡೋರು ಯಾರು, ಅವರ ಬಗ್ಗೆ ಗಮನ ಹರಿಸುವವರು ಯಾರು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.