ಸಿದ್ದರಾಮಯ್ಯ ಮುಸ್ಲಿಮರಿಗೆ ಫ್ರೀ ಪಾಸ್ ಕೊಟ್ಟಿದ್ದಾರೆ- ಸಿಎಂ ವಿರುದ್ಧ ಸೂಲಿಬೆಲೆ ಗರಂ

Public TV
1 Min Read

ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ಮುಸ್ಲಿಮರಿಗೆ ಫ್ರೀ ಪಾಸ್ ಕೊಟ್ಟಿದ್ದಾರೆ. ನಾವು ಏನು ಮಾಡಿದರೂ ಕರ್ನಾಟಕದಲ್ಲಿ (Karnataka) ಬಚಾವ್ ಆಗಬಹುದು ಅನ್ನೋ ಮನಸ್ಥಿತಿಗೆ ಮುಸಲ್ಮಾನರು ಬಂದಿದ್ದಾರೆ ಎಂದು ಸಿಎಂ ವಿರುದ್ಧ ಹಿಂದೂ ಮುಖಂಡ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ (Bengaluru) ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾಗಮಂಗಲದ (Nagamangala) ಘಟನೆ ಬಹಳ ದುರಂತಕಾರಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮುಸಲ್ಮಾನರಿಗೆ ಒಂದು ಥರ ಫ್ರೀಡಂ ಸಿಕ್ಕಿದೆ. ಹೀಗಾಗಿ ನಾವು ಕಲ್ಲು ಹೊಡೆದು ಬಚಾವ್ ಆಗಬಹುದು, ಮೂರ್ತಿ ಕೆಡವಿ ಬಚಾವ್ ಆಗಬಹುದು ಅಂದುಕೊಂಡಿದ್ದಾರೆ. ನಾಗಮಂಗಲದಲ್ಲಿ ಕಲ್ಲು ಎಸೆದಿರುವುದು ಇದೇ ಮನಸ್ಥಿತಿಯಲ್ಲಿ. ಗಣೇಶೋತ್ಸವ ಮಾಡೋದು ಹಿಂದೂಗಳು ಒಗ್ಗಟ್ಟಾಗಿ ಒಂದು ಕಡೆ ಸೇರಲಿ ಎಂದು. ನಿಮ್ಮ ದರ್ಗಾ, ಮಸೀದಿ ಎದುರು ಮೆರವಣಿಗೆ ಬರಬಾರದು ಎಂದರೆ ಯಾವ ನಿಯಮ ಇದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಕಲ್ಲು, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ: ಪ್ರತಾಪ್ ಸಿಂಹ

ಇದು ಸ್ವತಂತ್ರ ಭಾರತ ಅವರವರ ಧಾರ್ಮಿಕ ಆಚರಣೆ ಮಾಡುವ ಅವಕಾಶವಿದೆ. ಗಣೇಶೋತ್ಸವ ಮೆರವಣಿ ಸದ್ದು ಮುಸ್ಲಿಮರಿಗೆ ಬೇಡ. ಆದರೆ ಪ್ರತೀ ದಿನ ಮಸೀದಿಗಳಿಂದ ಅಜಾನ್ ಕೇಳುತ್ತದೆ. ಅದನ್ನ ಹಿಂದೂಗಳು ಸಹಿಸಿಕೊಳ್ಳಬೇಕು. ಆದರೆ ಹನುಮ ಜಯಂತಿ, ಗಣೇಶೋತ್ಸವ ನಿಮಗೆ ಯಾಕೆ ಬೇಡ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮ ಮಕ್ಳನ್ನು ಬಿಟ್ಬಿಡಿ – ನಾಗಮಂಗಲ ಪೊಲೀಸ್ ಠಾಣೆಯ ಮುಂದೆ ಮಹಿಳೆಯರ ಹೈಡ್ರಾಮಾ

ಮುಸ್ಲಿಂ ತರುಣರನ್ನು ಈ ಸರ್ಕಾರ ಬೆಂಬಲ ಮಾಡುವುದು ದುರಂತ. ಸಿದ್ದರಾಮಯ್ಯರಿಗೆ ಧೈರ್ಯ, ಸಾಮರ್ಥ್ಯ ಇದ್ದರೆ ಬುಲ್ಡೋಜರ್ ಪ್ರಕ್ರಿಯೆ ಮಾಡಿ. ಯೋಗಿ ಆದಿತ್ಯನಾಥ್ ರೀತಿ ಅವರ ಮನೆಗಳನ್ನು ಬುಲ್ಡೋಜರ್ ಮೂಲಕ ಉರುಳಿಸಿ. ನಿಮ್ಮನ್ನು ನೋಡಿದರೆ ಇದು ಸಾಧ್ಯವಿಲ್ಲ ಅನ್ನಿಸುತ್ತದೆ ಎಂದು ಟೀಕಿಸಿದರು. ಇದನ್ನೂ ಓದಿ: ನಾಗಮಂಗಲ ಘಟನೆಗೆ ಒಂದು ಸಮುದಾಯದ ಅತಿಯಾದ ಓಲೈಕೆ ಕಾರಣ- ಸರ್ಕಾರದ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Share This Article