ಸಿದ್ದು, ಡಿಕೆಶಿಗೆ ಖರ್ಗೆಯ ಭಯ ಶುರುವಾಗಿದೆ: ಕಟೀಲ್

Public TV
1 Min Read

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ನೂತನ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಟಾಂಗ್ ನೀಡಿದ್ದಾರೆ.

ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಖರ್ಗೆಯವರು ಕಾಂಗ್ರೆಸ್ (Congress) ಅಧ್ಯಕ್ಷರಾಗಿರುವುದಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ವಿಚಲಿತವಾಗಿಲ್ಲ. ಆದರೆ ಕಾಂಗ್ರೆಸ್‌ನವರೇ ವಿಚಲಿತರಾಗಿದ್ದಾರೆ ಎಂದು ತಿರುಗೇಟು ನೀಡಿದರು.

ಭಾರತ್ ಜೋಡೋ ಯಾತ್ರೆಯಿಂದ ಅವರೊಳಗೆ ಕಚ್ಚಾಟ ಪ್ರಾರಂಭವಾಗಿದೆ. ಡಿಕೆಶಿ ಕೈ ಹಿಡಿಯುವುದೋ ಅಥವಾ ಸಿದ್ದರಾಮಯ್ಯ ಕೈ ಹಿಡಿಯುವುದೋ ಎಂಬ ಚರ್ಚೆ ಪ್ರಾರಂಭವಾಗಿದೆ. ಡಿಕೆಶಿ ಬೆಂಬಲಿಗರಿಗೆ ಅವರು ಮುಖ್ಯಮಂತ್ರಿ ಆಗಬೇಕು ಅಂತ ಇದ್ದರೆ, ಸಿದ್ದರಾಮಯ್ಯ ತಂಡಕ್ಕೆ ಅವರು ಮುಖ್ಯಮಂತ್ರಿ ಆಗಬೇಕು ಅಂತ ಇದೆ. ಇದರ ನಡುವೆ ಇವರಿಬ್ಬರಿಗೆ ಖರ್ಗೆಯ ಭಯ ಶುರುವಾಗಿದೆ ಎಂದರು. ಇದನ್ನೂ ಓದಿ: ಒಕ್ಕಲಿಗರಿಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು: ನಂಜಾವಧೂತ ಶ್ರೀ

ಈ ಹಿಂದೆ ಖರ್ಗೆಯವರನ್ನು ಮುಗಿಸಲು ಇವರೆಲ್ಲಾ ತಂತ್ರಗಾರಿಕೆ ಮಾಡಿದ್ದರು. ಈಗ ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರು ಇವರನ್ನೇನು ಮಾಡುತ್ತಾರೆ ಎನ್ನುವ ಭಯ ಶುರುವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *