ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

Public TV
2 Min Read

ಹುಬ್ಬಳ್ಳಿ: ಬಿಜೆಪಿಯವರು (BJP) ಗೋವುಗಳನ್ನು (Cow) ರಕ್ಷಣೆ ಮಾಡ್ತೀವಿ ಅಂತಾರೆ. ಯಾವತ್ತೂ ದನಕಾಯದೇ ಇರುವವರು, ಸಗಣಿ ಎತ್ತದವರು ಗೋವುಗಳ ರಕ್ಷಣೆ ಅಂತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಲೇವಡಿ ಮಾಡಿದ್ದಾರೆ.

ಧಾರವಾಡ (Dharwad) ಜಿಲ್ಲೆಯ ಸಂಶಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನತೆ ತಂದವರು ಬುದ್ಧ, ಬಸವಣ್ಣ, ಅಂಬೇಡ್ಕರ್. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇವತ್ತಿಗೂ ಬದಲಾವಣೆ ಆಗಬಾರದು ಎಂದು ಪಟ್ಟು ಹಿಡಿದಿವೆ. ಬಡತನ, ಅಸಮಾನತೆ ಹೋಗಬಾರದು ಎಂಬುದು ಬಿಜೆಪಿ ಆಸೆಯಾಗಿದೆ. ಗೋ ರಕ್ಷಣೆ ಮಾಡ್ತೀವಿ ಅಂತಾರೆ. ಯಾವತ್ತು ದನಕಾಯದೇ ಇರುವವರು, ಸಗಣಿ ಎತ್ತದವರು ಗೋ ರಕ್ಷಣೆ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin Disease) ಬಂದಿದೆ. ಅದನ್ನು ವಾಸಿ ಮಾಡ್ರಯ್ಯ ಅಂದ್ರೆ, 6 ತಿಂಗಳಾದ್ರೂ ಜಾನುವಾರುಗಳಿಗೆ ಲಸಿಕೆ ಹಾಕಲು ಈ ಸರ್ಕಾರಕ್ಕೆ ಆಗ್ತಿಲ್ಲ. ಈ ಸರ್ಕಾರ ಇರಬೇಕಾ? ಮೊದಲು ಕಿತ್ತು ಎಸೆಯಬೇಕು. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ, ಬಿಜೆಪಿ ಕಿತ್ತೆಸೆಯಿರಿ. ಬಿಜೆಪಿಯವರು ಇದ್ದರೆ ಸಮ ಸಮಾಜ ನಿರ್ಮಾಣ ಆಗೋದಿಲ್ಲ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

ರಾಯಣ್ಣ ಬ್ರಿಗೇಡ್ ಎಲ್ಲಿದೆ?
ಮಂತ್ರಿ ಸ್ಥಾನಕ್ಕಾಗಿ ರಾಯಣ್ಣ ಬ್ರಿಗೇಡ್ ಮಾಡ್ತೀವಿ ಅಂತಾ ಹೇಳಿದ್ರು. ಮಂತ್ರಿ ಸ್ಥಾನ ಹೋದ ಮೇಲೆ ನೋ ಬ್ರಿಗೇಡ್ ಅಂತಿದ್ದಾರೆ. ಸಮಾಜಕ್ಕಾಗಿ ಯಾರು ಕೆಲಸ ಮಾಡ್ತಾರೋ ಅವರು ನಿಜವಾದ ಸಮಾಜ ಸೇವಕರಾಗ್ತಾರೆ ಎಂದು ಪರೋಕ್ಷವಾಗಿ ಕೆ.ಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

ಸಮಾಜದಲ್ಲಿ ಬದಲಾವಣೆ ತರಲು ಬದ್ಧತೆ ಇರುವವರಿಗೆ ಮಾತ್ರ ಸಾಧ್ಯ. 2023ರ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ. ಬಿಜೆಪಿಗೆ ಮತ ಹಾಕಿದ್ರೆ, ಅಲ್ಲಿ ಯಾರು ತಾನೆ ಸಿಎಂ ಆಗ್ತಾರೆ? ಜೆಡಿಎಸ್‌ಗೆ ಮತ ಹಾಕಿದ್ರೆ ಯಾರಿಗೆ ಲಾಭ? ಅದೇ ಕಾಂಗ್ರೆಸ್‌ಗೆ ಮತ ನೀಡಿದ್ರೆ ನಿಮ್ಮ ಕೈನಲ್ಲೇ ಅಧಿಕಾರ ಇರುತ್ತೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *