ಸಿದ್ದಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ – ದೇವರ ಸ್ಪಂದನೆ ನೋಡಿ ವೈದ್ಯರಿಗೇ ಆಶ್ಚರ್ಯ

Public TV
1 Min Read
Siddaganga seer 1 copy

ಚೆನ್ನೈ: ಸಿದ್ದಗಂಗಾ ಶ್ರೀಗಳಿಗೆ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ವೈದ್ಯ ಮೊಹಮ್ಮದ್ ರೇಲಾ ನೇತೃತ್ವದ ತಂಡ 4 ಗಂಟೆಗಳ ಕಾಲ ಪಿತ್ತಕೋಶ ಸೋಂಕಿನ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು.

ಶ್ರೀಗಳಿಗೆ ಈ ಹಿಂದೆ ಅಳವಡಿಸಲಾಗಿದ್ದ ಲೋಹ ಮತ್ತು ಸ್ಟೆಂಟ್‍ಗಳನ್ನು ತೆಗೆದು ಹಾಕಲಾಗಿದೆ. ಸದ್ಯ ಶ್ರೀಗಳನ್ನ ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಐಸಿಯುನಲ್ಲೇ 3 ದಿನ ಇರಲಿದ್ದಾರೆ. ಬಳಿಕ ವಿಐಪಿ ವಾರ್ಡ್‍ಗೆ ಶಿಫ್ಟ್ ಮಾಡಿ. ಅವರಲ್ಲಿ ಮತ್ತಷ್ಟು ಚೇತರಿಕೆ ಕಂಡ ಬಳಿಕವಷ್ಟೇ ಡಿಸ್ಚಾರ್ಜ್ ಮಾಡುವ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

Siddaganga seer HSPL BULLETEN copy

ಸಾಮಾನ್ಯವಾಗಿ ಅನಸ್ತೇಶಿಯಾ ಕೊಟ್ಟರೆ ಆಯಾಸ ಆಗುತ್ತೆ. ಆದರೆ ಶ್ರೀಗಳಿಗೆ ಆ ಮಟ್ಟದಲ್ಲಿ ಆಯಾಸವೇ ಆಗಿಲ್ಲ. ಅರವಳಿಕೆಯಿಂದ ಶ್ರೀಗಳು ಎಚ್ಚರಗೊಂಡು 111 ವರ್ಷಗಳ ವಯಸ್ಸಿನಲ್ಲಿ ಈ ಪಾಟಿ ಲವಲವಿಕೆಯಿಂದ ಇರುವುದನ್ನು ಕಂಡ ರೇಲಾ ಆಸ್ಪತ್ರೆ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಐಸಿಯುನಲ್ಲಿ ಯಾರೂ ಇಲ್ಲದೆ ಮೌನ ಆವರಿಸಿದ್ದನ್ನು ಕಂಡ ಶ್ರೀಗಳು, ಎಲ್ಲಿ ಯಾರೂ ಕಾಣಿಸುತ್ತಿಲ್ಲ ಎಂದು ವೈದ್ಯರನ್ನ ಪ್ರಶ್ನಿಸಿದ್ದು, ಗ್ಲೂಕೋಸ್ ಪೈಪ್ ತೆಗೆಯುವಂತೆಯೂ ಹೇಳಿದ್ದಾರೆ ಎನ್ನಲಾಗಿದೆ.

ಬಿಜಿಎಸ್ ಖ್ಯಾತ ವೈದ್ಯ ಡಾ.ರವೀಂದ್ರ, ಕಿರಿಯ ಶ್ರೀಗಳು ಈ ವೇಳೆ ಚೆನ್ನೈ ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದಾರೆ. ಈ ನಡುವೆ ರೇಲಾ ಆಸ್ಪತ್ರೆಗೆ ಸುತ್ತೂರಿನ ಶಿವಕುಮಾರ್ ದೇಶೀಕೇಂದ್ರ ಸ್ವಾಮೀಜಿಗಳು, ಶಾಸಕರಾದ ಸೋಮಣ್ಣ ಮತ್ತು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳ ಆರೋಗ್ಯ ವಿಚಾರಿಸಲು ಸಚಿವ ಡಿ.ಕೆ.ಶಿವಕುಮಾರ್ ಚೆನ್ನೈನ ರೇಲಾ ಆಸ್ಪತ್ರೆ ತಲುಪಿದ್ದಾರೆ. ನಾಳೆ ಸಿಎಂ ಕುಮಾರಸ್ವಾಮಿ ಅವರು ಸಹ ಚೆನ್ನೈಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

SIDDAGANGA SRII 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article