ಮರಿ ಟೈಗರ್ ವಿನೋದ್ ಪ್ರಭಾಕರ್ ಗೆ ಶ್ವೇತಾ ಡಿಸೋಜಾ ನಾಯಕಿ

Public TV
1 Min Read

ಗೊಂಬೆಗಳ ಲವ್ ಸಿನಿಮಾ ಖ್ಯಾತಿಯ ಅರುಣ್ ಕುಮಾರ್ (Arun Kumar) ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಇವರಿಬ್ಬರ ಕಾಂಬಿನೇಷನ್ ನೆಲ್ಸನ್ ಸಿನಿಮಾದ ಟೀಸರ್ ಧೂಳ್ ಎಬ್ಬಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ನೆಲ್ಸನ್ ಗೆ ನಾಯಕಿ ಸಿಕ್ಕಿದ್ದಾಳೆ. ಮಾಸ್ ಮರಿ ಟೈಗರ್ ವಿನೋದ್ ಗೆ ಜೋಡಿಯಾಗಿ ಶ್ವೇತಾ ಡಿಸೋಜಾ ನಟಿಸಲಿದ್ದಾರೆ.

ಕರಾವಳಿಯ ಚೆಲುವೆ ಶ್ವೇತಾ ಡಿಸೋಜಾ (Shweta D’Souza) ನೆಲ್ಸನ್ ಬಳಗ ಸೇರಿಕೊಂಡಿದ್ದಾರೆ. ಹಿಂದಿ ಸಿನಿಮಾ Y ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದ ಈ ಸುಂದರಿ ಖಾಸಗಿ ಪುಟಗಳು ಹಾಗೂ ಹೆಜ್ಜಾರು ಚಿತ್ರದಲ್ಲಿ ನಟಿಸಿದ್ದಾರೆ. ಹೆಜ್ಜಾರು ಸಿನಿಮಾಗಾಗಿ ಕಾಯ್ತಿರುವ ಶ್ವೇತಾ, ಈಗ ನೆಲ್ಸನ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

1960-90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರ ನೆಲ್ಸನ್. ಗ್ಯಾಂಗ್ ಸ್ಟರ್ ಕಥಾಹಂದರ ಹೊಂದಿದ್ದು,  ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ.

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅರುಣ್ ಕುಮಾರ್ ನೆಲ್ಸನ್ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅರುಣ್ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ.

Share This Article