ಕೋಲ್ಕತ್ತಾ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿ ನ.14ರಿಂದ ಶುರುವಾಗಿದೆ. ಈಗಾಗಲೇ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಈ ನಡುವೆಯೇ ಯುವನಾಯಕ ಶುಭಮನ್ ಗಿಲ್ (Shubman Gill) ಶಾಕ್ ಕೊಟ್ಟಿದ್ದಾರೆ.
ಶನಿವಾರ ಸಂಜೆ ಮೈದಾನದಲ್ಲಿ ತೀವ್ರ ಕುತ್ತಿಗೆ ನೋವಿನಿಂದ ಬಳಲಿದ ಶುಭಮನ್ ಗಿಲ್ ಅವರನ್ನ ಸ್ಟ್ರೆಚರ್ ಮೂಲಕ ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಸದ್ಯ ಗಿಲ್ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2ನೇ ಟೆಸ್ಟ್ ಪಂದ್ಯ (Test Cricket Match) ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: IPL retentions 2026: ಯಾವ್ಯಾವ ತಂಡದಿಂದ ಯಾವ ಆಟಗಾರರು ಔಟ್ – ಇಲ್ಲಿದೆ ಫುಲ್ ಲಿಸ್ಟ್
ಮೊದಲು ಗಿಲ್ ನಾಲ್ಕು ಮಂದಿಯ ಸಹಾಯದಿಂದ ಮೈದಾನದಿಂದ ಹೊರ ನಡೆದಿದ್ದರು. ಸೈಮನ್ ಹರ್ಮರ್ ಅವರ ಎಸೆತವನ್ನ ಬೌಂಡರಿಗಟ್ಟುವ ಸಂದರ್ಭದಲ್ಲಿ ಗಿಲ್ ಅವರಿಗೆ ಕುತ್ತಿಗೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ತಂಡದ ವೈದ್ಯರು ಧಾವಿಸಿದರು. ಕೇವಲ ಮೂರು ಎಸೆತಗಳಲ್ಲಿ ನಾಲ್ಕು ರನ್‍ಗಳಾಗಿದ್ದಾಗ ಗಾಯಗೊಂಡು ನಿವೃತ್ತಿಯಾದರು. ಸದ್ಯ ನಾಯಕ ಶುಭಮನ್ ಗಿಲ್‌ರನ್ನ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ. ಇದನ್ನೂ ಓದಿ: ಜಡೇಜಾ ಕೈಬಿಟ್ಟು ಸ್ಯಾಮ್ಸನ್ ಸೇರಿಸಿಕೊಂಡ ಸಿಎಸ್‌ಕೆ; ಯಾವ್ಯಾವ ತಂಡಕ್ಕೆ ಯಾವ ಆಟಗಾರರು ಟ್ರೇಡ್- ಇಲ್ಲಿದೆ ಪಟ್ಟಿ
2ನೇ ಟೆಸ್ಟ್ ಆಡೋದು ಡೌಟ್!
ಮೊದಲ ಟೆಸ್ಟ್ ಪಂದ್ಯ ನ.14 ರಿಂದ ಶುರುವಾಗಿದ್ದು, ಇಂದು ಮೂರನೇ ದಿನದಾಟ ಆಡಲಿದೆ ದಕ್ಷಿಣ ಆಫ್ರಿಕಾ. 2ನೇ ಇನ್ನಿಂಗ್ಸ್‌ನಲ್ಲಿ 93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ಆಫ್ರಿಕಾ 63 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಭಾರತ ತಂಡ ಗೆಲ್ಲುವ ವಿಶ್ವಾಸದಲ್ಲಿದೆ. ಈ ನಡುವೆಯೇ ಕ್ಯಾಪ್ಟನ್ ಗಿಲ್ ಕುತ್ತಿಗೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ನವೆಂಬರ್ 22 ರಿಂದ 26ರ ವರೆಗೆ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.
ಮೂಲಗಳ ಪ್ರಕಾರ, ಗಿಲ್ ಫಿಟ್ ಆಗಲು ಇನ್ನೂ ಕೆಲ ದಿನಗಳು ಬೇಕಾಗುತ್ತದೆ. ಹಾಗಾಗಿ ಅವರು 2ನೇ ಟೆಸ್ಟ್ ನಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ.
2ನೇ ದಿನದಾಟದಲ್ಲಿ ಗಿಲ್ ಮೈದಾನ ತೊರೆದಾಗ ಉಪನಾಯಕ ರಿಷಭ್ ಪಂತ್ ತಂಡವನ್ನ ಮುನ್ನಡೆಸಿದ್ದರು. ಹಾಗಾಗಿ 2ನೇ ಪಂದ್ಯದಲ್ಲಿ ಪಂತ್ ಅವರೇ ನಾಯಕನಾಗಿ ತಂಡವನ್ನ ಮುನ್ನಡೆಸುವ ಸಾಧ್ಯೆಯಿದೆ.



