ಗಿಲ್‌ ಗಿಲ್‌ ಗಿಲಕ್‌ – ಮತ್ತೊಂದು ʻಶುಭʼ ಶತಕ, ಕೊಹ್ಲಿ ದಾಖಲೆ ಸರಿಗಟ್ಟಿದ ಯುವ ನಾಯಕ

Public TV
2 Min Read

ಎಡ್ಜ್‌ಬಾಸ್ಟನ್‌: ಇಂಗ್ಲೆಂಡ್‌ ವಿರುದ್ಧ ನಡೆಯುವ 2ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಯುವ ನಾಯಕ ಶುಭಮನ್‌ ಗಿಲ್ (Shubman Gill) ‌ಮತ್ತೊಂದು ಶತಕ ಸಿಡಿಸುವ ಮೂಲಕ ರನ್‌ ಮಿಷನ್‌ ಕೊಹ್ಲಿ (Virat Kohli) ಅವರ ಅಪರೂಪದ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್‌ ಬಾರಿಸಿ ಆಂಗ್ಲರನ್ನ ಕಾಡಿದ್ದ ಗಿಲ್‌ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಅಜೇಯ ಆಟ ಮುಂದುವರಿಸಿದ್ದಾರೆ. ಇದರೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ 68 ಓವರ್‌ಗೆ 4 ವಿಕೆಟ್‌ಗೆ 304 ರನ್‌ ಗಳಿಸಿರುವ ಭಾರತ ಭರ್ಜರಿ 484 ರನ್‌ಗಳ ಮುನ್ನಡೆಯಲ್ಲಿದೆ. ಇದನ್ನೂ ಓದಿ: ತೂಫಾನ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

ನಾಯಕನಾದ ಚೊಚ್ಚಲ ಟೆಸ್ಟ್‌ ಸರಣಿಯಲ್ಲೇ (Test Series) ಚೊಚ್ಚಲ ದ್ವಿಶತಕ ಬಾರಿಸಿರುವ ಗಿಲ್‌ ಆಡಿರುವ 2 ಪಂದ್ಯಗಳಲ್ಲಿ 3 ಶತಕಗಳನ್ನ ಸಿಡಿಸಿದ್ದಾರೆ. ಈ ಮೂಲಕ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಟೀಂ ಇಂಡಿಯಾದ 2ನೇ ನಾಯಕ ಎಂಬ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2014/15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಅಂದಿನ ಭಾರತದ ನಾಯಕ ವಿರಾಟ್‌ ಕೊಹ್ಲಿ 3 ಶತಕ ಗಳಿಸಿದ್ದರು. ಇದೀಗ ಇಂಗ್ಲೆಂಡ್‌ ನೆಲದಲ್ಲಿ ಶುಭಮನ್‌ ಗಿಲ್‌ 3 ಶತಕಗಳನ್ನು ಸಿಡಿಸಿ ಈ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ: ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

ದಿಗ್ಗಜರ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆ
ಇನ್ನೂ ನಾಯಕ ಶುಭಮನ್ ಗಿಲ್‌ ಕೇವಲ 4 ಇನ್ನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ರನ್‌ ಪೂರೈಸಿದ್ದಾರೆ. ಟೆಸ್ಟ್ಟ್ ಪಂದ್ಯದ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತದ ಆಟಗಾರನೆಂಬ ದಾಖಲೆ ನಿರ್ಮಿಸಿದ್ದ ಗಿಲ್‌ ಶತಕ ಸಿಡಿಸಿ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ. ಹೌದು. ಭಾರತದ ಪರ ಟೆಸ್ಟ್‌ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಸಿಡಿಸಿದ ಸಾಧನೆ ಸುನೀಲ್‌ ಗವಾಸ್ಕರ್‌ 1971ರಲ್ಲಿ ಮಾಡಿದ್ದರು. ಇದೀಗ ಈ ಪಟ್ಟಿಗೆ ಗಿಲ್‌ ಕೂಡ ಸೇರಿಕೊಂಡಿದ್ದಾರೆ.

ಇದಕ್ಕೂ ಮುನ್ನ 250+ ರನ್‌ ಬಾರಿಸಿ ಆಂಗ್ಲರ ಬೆವರಿಳಿದ್ದ ಕ್ಯಾಪ್ಟನ್‌ ಗಿಲ್‌ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ ಬಳಿಕ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಗಿಲ್‌ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

Share This Article