ಭಾನುವಾರ ಭಾರತಕ್ಕೆ ಶುಭಾಂಶು ಶುಕ್ಲಾ: ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ತವರಿಗೆ ಮೊದಲ ಭೇಟಿ

Public TV
1 Min Read

– ಪ್ರಧಾನಿ ಮೋದಿ ಭೇಟಿ ಸಾಧ್ಯತೆ

ನವದೆಹಲಿ: ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ಮೊದಲ ಬಾರಿಗೆ ತವರು ನೆಲ ಭಾರತಕ್ಕೆ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರು ಭಾನುವಾರ ಮರಳಲಿದ್ದಾರೆ.

ಈ ವೇಳೆ ಪ್ರಧಾನಿ ಮೋದಿಯನ್ನು (Narendra Modi)  ಭೇಟಿಯಾಗಲಿದ್ದಾರೆ. ನಂತರ ತಮ್ಮ ತವರೂರಾದ ಉತ್ತರ ಪ್ರದೇಶದ ಲಖನೌಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಗಗನಯಾನವನ್ನು ಎದುರು ನೋಡುತ್ತಿರುವುದರಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ ಅವರು ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆ – ಬಿಜೆಪಿ ಪಟ್ಟಿಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಹೆಸರು

 

View this post on Instagram

 

A post shared by Shubhanshu Shukla (@gagan.shux)

ಇದೀಗ ಶುಭಾಂಶು ಶುಕ್ಲಾ ಅವರು ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಪೋಸ್ಟ್ನಲ್ಲಿ ಅವರು, ನಾನು ಭಾರತಕ್ಕೆ (India) ಹಿಂತಿರುಗಲು ವಿಮಾನದಲ್ಲಿ ಕುಳಿತಾಗ, ನನ್ನ ಹೃದಯದಲ್ಲಿ ಮಿಶ್ರ ಭಾವನೆ ಉಂಟಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯಾಚರಣೆಯ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರನ್ನು ಬಿಟ್ಟು ಹೋಗುವುದು ನನಗೆ ದುಃಖ ತಂದಿದೆ. ಹಾಗೆಯೇ ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಜೀವನ ಎಂದರೆ ಇದೇ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಶುಕ್ಲಾ ಅವರು ರಾಜಧಾನಿಗೆ ಹಿಂತಿರುಗುವ ನಿರೀಕ್ಷೆಯಿದೆ ಎನ್ನಲಾಗಿದೆ.

Share This Article