ರಾಜಕೀಯದತ್ತ ಶ್ರುತಿ ಹಾಸನ್ ಚಿತ್ತ: ತಂದೆಯ ಹಾದಿಯಲ್ಲೇ ಮಗಳು

Public TV
1 Min Read

ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ರಾಜಕಾರಣದತ್ತ ಒಲವು ತೋರಿದ್ದಾರೆ. ಸದ್ಯದಲ್ಲೇ ಅವರು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರಂತೆ. ಕಮಲ್ ಹಾಸನ್ ಅವರೇ ಕಟ್ಟಿರುವ ‘ಮಕ್ಕಳ್ ನೀಧಿ ಮೈಯಂ’ (MNM) ಪಕ್ಷವನ್ನೇ ಶ್ರುತಿ ಹಾಸನ್ (Shruti Haasan ) ಸೇರಿಕೊಂಡು ಈ ಮೂಲಕ ಅಪ್ಪನ ಜೊತೆ ನಿಲ್ಲಲಿದ್ದಾರಂತೆ. ಹೀಗಂತ ತಮಿಳು ನಾಡು ತುಂಬೆಲ್ಲ ಪುಕಾರು ಎದ್ದಿದೆ.

ಚುನಾವಣೆ ತಯಾರಿಯಲ್ಲಿ ಕಮಲ್

ಲೋಕಸಭೆ (Lok Sabha) ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವಾಗಲೇ ನಟ ಕಮಲ್ ಹಾಸನ್ , ಚುನಾವಣೆಯಲ್ಲಿ (Election) ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಬಾರಿ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೂ ಆರಂಭಿಸಿದ್ದಾರಂತೆ.

ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಕೊಯಮತ್ತೂರು (Coimbatore) ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಡಿಮೆ ಅಂತರದ ಮತಗಳಿಂದ ಸೋಲು ಕಂಡಿದ್ದರು. ಕ್ಷೇತ್ರದ ನಾಡಿಮಿಡಿತ ಅರಿತವರು ಆಗಿದ್ದರಿಂದ ಇದೇ ಕ್ಷೇತ್ರದಲ್ಲೇ ಲೋಕಸಭಾ ಚುನಾವಣೆಯನ್ನು ಎದುರಿಸಲು ಅವರು ಸಜ್ಜಾಗಿದ್ದಾರಂತೆ.

 

ಒಂದು ಕಡೆ ಚುನಾವಣೆ ಸಿದ್ಧತೆ ಮತ್ತೊಂದು ಕಡೆ ಹೊಸ ಸಿನಿಮಾದ ಚಿತ್ರೀಕರಣ. ಹೀಗೆ ಬಿಡುವಿಲ್ಲದಂತೆ ಕಮಲ್ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಮ್ಮದೇ ಆದ ತಂಡವೊಂದನ್ನು ಮಾಡಿಕೊಂಡು, ಚುನಾವಣಾ ಪೂರ್ವ ತಯಾರಿಯನ್ನೂ ಅವರು ಆರಂಭಿಸಿದ್ದಾರಂತೆ. ಹಲವು ಬಾರಿ ಕ್ಷೇತ್ರಕ್ಕೂ ಅವರು ಹೋಗಿ ಬಂದಿದ್ದಾರೆ ಎನ್ನುತ್ತಾರೆ ಕಮಲ್ ಆಪ್ತರು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್