‌’ಸಲಾರ್‌’ ಬಳಿಕ ಬಿಗ್‌ ಚಾನ್ಸ್- ರಜನಿಕಾಂತ್ ಸಿನಿಮಾದಲ್ಲಿ ಶ್ರುತಿ ಹಾಸನ್

Public TV
1 Min Read

ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಬಹುಬೇಡಿಕೆ ನಟಿಯಾಗಿದ್ದಾರೆ. ‘ಸಲಾರ್’ ಸಿನಿಮಾದ ನಂತರ ಬಂಪರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ನಟಿಸುವ ಅವಕಾಶ ಒಲಿದು ಬಂದಿದೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಶಿಕುಮಾರ್‌ಗೆ ಚೈತ್ರಾ ಆಚಾರ್ ನಾಯಕಿ

ಪ್ರಭಾಸ್ ಜೊತೆಗಿನ ‘ಸಲಾರ್’ ಸಿನಿಮಾ ಆದ್ಮೇಲೆ ಯಾವುದೇ ಚಿತ್ರದ ಅಪ್‌ಡೇಟ್ ಹೊರಬಿದ್ದಿರಲಿಲ್ಲ. ಬ್ರೇಕಪ್‌ನಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ಶ್ರುತಿ ಈಗ ಹೊಸ ಚಿತ್ರದ ಅಪ್‌ಡೇಟ್ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಕೂಲಿ’ (Coolie Film) ಚಿತ್ರಕ್ಕೆ ನಟಿ ಎಂಟ್ರಿ ಕೊಟ್ಟಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ಪ್ರಸ್ತುತ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಈ ತಂಡದ ಜೊತೆ ನಟಿ ಸೇರಿಕೊಂಡಿದ್ದಾರೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ‘ಕೂಲಿ’ ಚಿತ್ರೀಕರಣದಲ್ಲಿ ಮೊದಲೇ ದಿನ ಎಂದು ನಟಿ ಅಡಿಬರಹ ನೀಡಿ ಶೂಟಿಂಗ್ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋದು ಈಗ ವೈರಲ್ ಆಗಿದೆ. ಸದ್ಯ ಈ ಬ್ರೇಕಿಂಗ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಚಿತ್ರದಲ್ಲಿ ಶ್ರುತಿ ಹಾಸನ್ ಪಾತ್ರದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ ಒಂದೇ ಚಿತ್ರದಲ್ಲಿ ರಜನಿಕಾಂತ್ (Rajanikanth) ಮತ್ತು ಶ್ರುತಿ ನಟಿಸ್ತಾರೆ ಎಂದು ಕೇಳಿ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

ಅಂದಹಾಗೆ, ಸಲಾರ್ 2, ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ.

Share This Article