ಬಹುಭಾಷಾ ನಟಿ ಶ್ರುತಿ ಹಾಸನ್‍ಗೆ ಕೂಡಿ ಬಂದಿದ್ಯಾ ಕಂಕಣ ಭಾಗ್ಯ?

Public TV
1 Min Read

ಚೆನ್ನೈ: ಬಹುಭಾಷಾ ನಟಿ ಶ್ರುತಿ ಹಾಸನ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ಯಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಬಹುದಿನಗಳಿಂದ ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್ ನಲ್ಲಿರುವ ಕುರಿತ ಗಾಸಿಪ್ ಹರಿದಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಟಿ ಶ್ರುತಿ ಹಾಸನ್, ಅವರ ತಾಯಿ ಸಾರಿಕಾ ಹಾಗೂ ಮೈಕಲ್ ಮೂವರೂ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಫೋಟೋದಲ್ಲಿ ನಟಿ ಶ್ರುತಿ ಹಾಸನ್ ತಾಯಿ ಸರಿಕಾ ಅವರು ಕೈಯಲ್ಲಿ ಹೂ ಗುಚ್ಛ ಹಿಡಿದು ಬರುತ್ತಿದ್ದಾರೆ. ಅಲ್ಲದೇ ಕಮಲ್ ಹಾಸನ್ ಅವರನ್ನೂ ಕೂಡ ಈ ಹಿಂದೆ ನಟ ಮೈಕಲ್ ಕೊರ್ಸೆಲ್ ಭೇಟಿಯಾಗಿದ್ದರು. ಶೃತಿ ಹಾಗೂ ಮೈಕಲ್ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಪೋಸ್ಟ್‍ಗಳಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಶುರುವಾಗಿತ್ತು. ಆದ್ರೆ ಈವರೆಗೆ ಈ ವಿಷಯ ಖಚಿತವಾಗಿಲ್ಲ.

ಈ ಕುರಿತು ಸಂದರ್ಶನವೊಂದರಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದ ಶೃತಿ ಹಾಸನ್, ಅಂತಹ ಊಹೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೂ ಅದರ ಬಗ್ಗೆ ಕಮೆಂಟ್ ಮಾಡಲು ಬಯಸುವುದಿಲ್ಲ. ಇದರಿಂದ ನನಗೆ ಕಿರಿಕಿರಿಯೂ ಆಗವುದಿಲ್ಲ. ನನ್ನ ವೈಯಕ್ತಿಕ ಜೀವನ ವಿಷಯಗಳ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದ್ದರು.

ಈ ಜೋಡಿಯ ಮದುವೆಗೆ ಕಮಲ್ ಹಾಸನ್ ಮತ್ತು ಸಾರಿಕಾ ಕೂಡಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಐಶ್ವರ್ಯ ರೈ, ಕರೀನಾ ಕಪೂರ್, ಕಾಜೋಲ್, ಸಮಂತಾರಂತೆ ಸ್ಟಾರ್ ಕಪಲ್‍ಗಳ ಸಾಲಿಗೆ ಶ್ರುತಿ ಹಾಸನ್ ಕೂಡಾ ಸೇರಲಿದ್ದಾರೆ.

https://www.instagram.com/p/BcHUL6qlCUN/?taken-by=ishrutihaasan

https://www.instagram.com/p/BcHUXcwlDyx/?taken-by=ishrutihaasan

https://www.instagram.com/p/Bb6bcxFFTZF/?taken-by=ishrutihaasan

https://www.instagram.com/p/Bbm7v5IFwQ0/?taken-by=ishrutihaasan

https://www.instagram.com/p/BbrXOVMFceg/?taken-by=ishrutihaasan

Share This Article
Leave a Comment

Leave a Reply

Your email address will not be published. Required fields are marked *