ಇತಿಹಾಸದಲ್ಲೇ ಮೊದಲು – ಕದ್ದುಮುಚ್ಚಿ ರಾತ್ರೋರಾತ್ರಿ ಬಜೆಟ್ ಮಂಡಿಸಿದ BBMP

Public TV
2 Min Read

ಬೆಂಗಳೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾತ್ರೋರಾತ್ರಿ ಬಜೆಟ್ (Budget 2022-23) ಮಂಡನೆ ಮಾಡಿದೆ. ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.

10,480 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಈ ಬಾರಿ ಬಜೆಟ್ ಮಂಡಿಸಲಾಗಿದೆ. ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆ ಬಜೆಟ್‍ನ ಶೇ.76ರಷ್ಟು ಅನುದಾನ ನಿರ್ವಹಣಾ ಶುಲ್ಕ, ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ರೂ., ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ ರೂ., ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ರೂ., ಆರೋಗ್ಯ ವಲಯಕ್ಕೆ 75 ಕೋಟಿ ರೂ. ಮೀಸಲಿಡಲಾಗಿದೆ.

ಆದಾಯ ಮೂಲಗಳು:
1. ತೆರಿಗೆ ಮತ್ತು ಕರಗಳ ಆದಾಯ – 368.15 (35%)
2. ತೆರಿಗೆಯೇತರ ಆದಾಯ – 2302-22 (22%)
3. ಭಾರತ ಸರ್ಕಾರ ಅನುದಾನ – 436.01 (4%)
4. ಕರ್ನಾಟಕ ಸರ್ಕಾರದ ಅನುದಾನ – 3576- 59 (34%)
5. ಅಸಾಧಾರಣ ಆದಾಯ – 489.30 (5%)
ಒಟ್ಟು – 10484.28 100%

ತಡರಾತ್ರಿ 11.24ಕ್ಕೆ ಆಯ್ಯವ್ಯಯ ಮಂಡನೆ ಆಗಿರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಪಾಲಿಕೆ ಸೋತಿದೆ. ಸದ್ಯ ತರಾತುರಿಯಲ್ಲಿ ಹಲವು ಬಜೆಟ್ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕಸದ ಲಾರಿಗೆ ಮತ್ತೊಂದು ಬಲಿ – 10 ದಿನದ ಅಂತರದಲ್ಲಿ ಎರಡನೇ ದುರ್ಮರಣ

ಮೂಲಗಳ ಮಾಹಿತಿ ಪ್ರಕಾರ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತೆ ತುಳಸಿ ಮದಿನೇನಿ ಬಜೆಟ್ ಮಂಡನೆಗೆ ಮುನ್ನ ಮ್ಯಾರಥಾನ್ ಮೀಟಿಂಗ್ ನಡೆಸಿದ್ದಾರೆ. ನಿನ್ನೆ ಸಿಎಂ ಸಹ ಪಾಲಿಕೆ ಅಧಿಕಾರಿಗಳ ಜೊತೆ ಕಡೆಯ ಸುತ್ತಿನ ಸಭೆ ನಡೆಸಿದ್ದಾರೆ. ಇದಾದ ಬಳಿಕ ಬಿಬಿಎಂಪಿ ಬಜೆಟ್ ಮಂಡನೆಗೆ ಮುಂದಾಗಿದೆ. ಜನಪ್ರತಿನಿಧಿಗಳು ಇಲ್ಲದೇ ಹೋದಾಗ ಅಧಿಕಾರಿಗಳು ರಾತ್ರಿ ವೇಳೆ ಬಜೆಟ್ ಮಂಡಿಸಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮಾ 30 ರಂದು ಬಜೆಟ್ ಮಂಡನೆ ಪ್ಲ್ಯಾನ್ ನಡೆದಿತ್ತು. ಆದರೆ ಎಲೆಕ್ಷನ್ ಬಜೆಟ್ ಎಂಬ ಕಾರಣಕ್ಕೆ ಜನಪ್ರತಿನಿಗಳ ಅಭಿಪ್ರಾಯ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಒಟ್ಟಿನಲ್ಲಿ ಇದೀಗ ಬಿಬಿಎಂಪಿ ಕದ್ದು ಮುಚ್ಚಿ ಬಜೆಟ್ ಮಂಡಿಸಿ ಹೊಸ ಮುನ್ನುಡಿ ಬರೆದಿದೆ. ಅಧಿಕಾರಿಗಳ ಲೆಕ್ಕ ತರಾಟೆಗೆ ತೆಗೆದುಕೊಂಡ ಸಚಿವರ ಮಧ್ಯಪ್ರವೇಶದ ಬಗ್ಗೆ ಎರಡು ದಿನಗಳ ಹಿಂದೆಯೇ ಪಬ್ಲಿಕ್ ಟಿವಿ ವರದಿ ನೀಡಿತ್ತು. ಮಧ್ಯರಾತ್ರಿ ಬಜೆಟ್ ಮಂಡನೆಯಿಂದ ಪಾಲಿಕೆ ಬಜೆಟ್ ಬಗ್ಗೆ ಹಲವು ಕುತೂಹೂಲಗಳು ಮತ್ತಷ್ಟು ಪುಷ್ಟಿ ಪಡೆದಿದೆ. 198 ಕಾರ್ಪೊರೇಟರ್ ಗಳ ಬದಲಾಗಿ ಒಬ್ಬರೇ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *