ತಿರುಪತಿಯಲ್ಲಿ ಭಕ್ತರ ಶೀಘ್ರ ದರ್ಶನಕ್ಕಾಗಿ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭ

Public TV
1 Min Read

– 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೌಂಟರ್‌ಗಳ ನಿರ್ಮಾಣ

ಹೈದರಾಬಾದ್: ತಿರುಪತಿಯಲ್ಲಿ (Tirupati) ಭಕ್ತರ ಶೀಘ್ರ ದರ್ಶನ ಮತ್ತು ಭಕ್ತರ ಕಾಯುವ ಸಮಯ ಕಡಿಮೆ ಮಾಡುವ ಸಲುವಾಗಿ ಟಿಟಿಡಿ (TTD) ದೇವಸ್ಥಾನ ಮಂಡಳಿ ಹೊಸ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭಿಸಿದೆ.

`ಶ್ರೀವಾಣಿ ದರ್ಶನ’ ಟಿಕೆಟ್ ಮೂಲಕ ಭಕ್ತರು ಕಾಯುವ ಸಮಯ ಕಡಿಮೆಯಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ. ಸದ್ಯ ನೂತನ ಶ್ರೀವಾಣಿ ದರ್ಶನ ಟಿಕೆಟ್ ವಿತರಣಾ ಕೇಂದ್ರವನ್ನು ತಿರುಮಲದಲ್ಲಿ ತೆರೆಯಲಾಗಿದೆ.

ಈ ಕುರಿತು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು (BR Naidu) ಮಾತನಾಡಿ, ಶ್ರೀವಾಣಿ ದರ್ಶನ ಟಿಕೆಟ್‌ಗಳಿಗಾಗಿ ಭಕ್ತರು ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಸಂದರ್ಭದಲ್ಲಿ, ಟಿಕೆಟ್‌ಗಳನ್ನು ಸುಲಭವಾಗಿ ನೀಡಲು ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

Share This Article