4 ವರ್ಷದಿಂದಲೂ ಒಂದೇ ವಾಟ್ಸಪ್ ಡಿಪಿ – ಶ್ರೇಯಸ್ ಅಯ್ಯರ್ ತಂದೆಯ ಕನಸು ಕೊನೆಗೂ ನನಸು

Public TV
2 Min Read

ಕಾನ್ಪುರ: ಟೀಂ ಇಂಡಿಯಾ ತಂಡದ ಬಲಗೈ ಬ್ಯಾಟ್ಸ್‌ಮ್ಯಾನ್‌ ಶ್ರೇಯಸ್ ಅಯ್ಯರ್ ತಂದೆ ಸಂತೋಷ ಅವರು ಕಳೆದ ನಾಲ್ಕು ವರ್ಷಗಳಿಂದ ವಿಭಿನ್ನವಾದ ವಾಟ್ಸಪ್ ಡಿಪಿ ಇಟ್ಟಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

2017ರಲ್ಲಿ ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 2-1 ಅಂತರಿಂದ ಭರ್ಜರಿ ಜಯ ಸಾಧಿಸಿತ್ತು. ಈ ವೇಳೆ ಶ್ರೇಯಸ್ ಟ್ರೋಫಿಯನ್ನು ಹಿಡಿದಿರುವುದನ್ನು ಸಂತೋಷ್ ಅವರು ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಾಟ್ಸ್‍ಆ್ಯಪ್ ಡಿಪಿಯಾಗಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

ಸಂತೋಷ್ ಅವರು ತಮ್ಮ ಮಗನ ಆಟವನ್ನು ಯಾವಾಗಲೂ ಸಾಂಪ್ರದಾಯಿಕವಾಗಿ ನೋಡಲು ಬಯಸುತ್ತಿದ್ದರು. ಶ್ರೇಯಸ್ ಅವರಿಗೆ ಟೆಸ್ಟ್ ಪಂದ್ಯವನ್ನು ಹೆಚ್ಚು ಆಡುವುದು ಅವರ ಅಂತಿಮ ಗುರಿಯಾಗಬೇಕು. ಅದನ್ನು ನೆನಪಿಸಲು ಕಳೆದ 4 ವರ್ಷಗಳಿಂದ ಡಿಪಿಯನ್ನು ಬದಲಿಸಿರಲಿಲ್ಲ ಎಂದು ಅಯ್ಯರ್ ತಂದೆ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂತೋಷ್, ಈ ಡಿಪಿ ನನಗೆ ತುಂಬಾ ಹತ್ತಿರವಾಗಿದ್ದು, ಆಸ್ಟ್ರೇಲಿಯಾ ವಿರುದ್ಧವಾಗಿ ಆಡುವಾಗ ಧರ್ಮಶಾಲಾದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಅಯ್ಯರ್ ಸ್ಟಾಂಡ್ ಬಾಯ್ ಆಗಿ ಕಾರ್ಯ ನಿರ್ವಹಿಸಿದ್ದರು ಎಂದು ನೆನಪಿಸಿಕೊಂಡರು. ಶ್ರೇಯಸ್ ಅವರ ಮೊದಲ ಟೆಸ್ಟ್ ಪಂದ್ಯವನ್ನು ನೋಡಿ ತುಂಬಾ ಸಂತೋಷ ಪಟ್ಟಿದ್ದೇನೆ. ಟೆಸ್ಟ್ ಪಂದ್ಯವೇ ನಿಜವಾದ ಕ್ರಿಕೆಟ್. ಶ್ರೆಯಸ್ ಅವರನ್ನು ಯಾವಾಗಲೂ ಟೆಸ್ಟ್ ಪಂದ್ಯಾವಳಿಯಲ್ಲಿ ನೋಡಬೇಕೆಂಬ ಆಸೆಯಿತ್ತು. ಈ ಕನಸು ಇಂದು ಈಡೇರಿದೆ. ಇದನ್ನೂ ಓದಿ: ಗೆಳತಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ ಶ್ರೇಯಸ್ ಗೋಪಾಲ್

ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡುತ್ತಾರೆ ಎಂಬುದನ್ನು ನೀರಿಕ್ಷಿಸಿರಲಿಲ್ಲ. ನನ್ನ ಮಗನು ಸಾಧನೆ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ನಾವು ಯಾವಾಗಲೂ ಮಗನನ್ನು ಟೆಸ್ಟ್ ಪಂದ್ಯದಲ್ಲಿ ನೋಡಲು ಬಯಸುತ್ತೇವೆ. ಇದರಿಂದಾಗಿ ಟೆಸ್ಟ್ ಪಂದ್ಯದಲ್ಲಿ ಸ್ಥಾನಗಳಿಸಲು ಪ್ರಯತ್ನಿಸು ಎಂದು ಸಲಹೆ ನೀಡುತ್ತಿದ್ದೆ ಇಂದು ನೇರವೆರಿರುವುದು ಖುಷಿ ತಂದಿದೆ. ಇದಕ್ಕೆ ತನ್ನ ಪತ್ನಿಯೂ ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದು ನುಡಿದರು.

ಕಾನ್ಪುರದ ಗ್ರೀನ್ ಪಾರ್ಕ್‍ನಲ್ಲಿ ನಿನ್ನೆಯಿಂದ ಪ್ರಾರಂಭವಾದ ಮೊದಲ ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಪಂದ್ಯ ಶ್ರೇಯಸ್ ಅಯ್ಯರ್ ಅವರಿಗೆ ಜೀವನದ ಅತ್ಯಮೂಲ್ಯ ಘಳಿಗೆಯಾಗಿದೆ. ಅಯ್ಯರ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದರು. 105 ರನ್‍ (171 ಎಸೆತ, 13 ಬೌಂಡರಿ, 2 ಸಿಕ್ಸ್) ಸಿಡಿಸಿದ್ದಾರೆ. ಅಯ್ಯರ್ ಅವರಿಗೆ ಟೆಸ್ಟ್ ಕ್ಯಾಪ್‍ನ್ನು ಭಾರತದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *