ಕೋಲಾರ: ಇಂದು 4ನೇ ಶ್ರಾವಣ ಶನಿವಾರ (Shravan Saturday) ಹಿನ್ನೆಲೆ ಕೋಲಾರ (Kolar) ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಜನ ಸಾಗರವೇ ಹರಿದು ಬಂದಿತ್ತು.
ಕೋಲಾರ ಜಿಲ್ಲೆ ಕೆಜಿಎಫ್ (KGF) ತಾಲೂಕು ಬಂಗಾರ ತಿರುಪತಿ ದೇವಾಲಯ (Bangaru Tirupati Temple), ಮಾಲೂರು ತಾಲೂಕು ಚಿಕ್ಕ ತಿರುಪತಿ ದೇವಾಲಯದಲ್ಲೂ (Chikka Tirupati Temple) ಜನರ ದಂಡು ಹೆಚ್ಚಾಗಿತ್ತು. ಇತಿಹಾಸ ಪ್ರಸಿದ್ಧ ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿ ಹಾಗೂ ಚಿಕ್ಕ ತಿರುಪತಿಯ ಪ್ರಸನ್ನ ವೆಂಕರಮಣ ಸ್ವಾಮಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಂದು ಮುಂಜಾನೆಯಿಂದ ಶ್ರದ್ಧಾ ಭಕ್ತಿಯಿಂದ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಲಾಯಿತು. ಇದನ್ನೂ ಓದಿ: ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ
ಶ್ರಾವಣ ಮಾಸದ ಪ್ರಯುಕ್ತ ಭಕ್ತರಿಂದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ವಿಶೇಷ ಹರಕೆ ತೀರಿಸಿದರು. ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಿಂದ ಭಕ್ತರಿಗೆ ಪ್ರಸಾದ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಮಾಡಲಾಗಿತ್ತು. ಇನ್ನೂ ಕೋಲಾರ ನಗರದ ಪೇಟೆ ವೆಂಕಟರಮಸ್ವಾಮಿ ದೇವಾಲಯಕ್ಕೂ ಭಕ್ತ ಸಾಗರ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಭಕ್ತ ಗಣ ಆಗಮಿಸಿತ್ತು. ಇದನ್ನೂ ಓದಿ: ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ
ಕೋಲಾರ ನಗರದ ಶಾರದ ಚಿತ್ರಮಂದಿರ ಬಳಿಯಿರುವ ಪೇಟೆ ವೆಂಕಟರಮಣಸ್ವಾಮಿ ದೇವಾಲಯ, 4ನೇ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಾಲಯದಲ್ಲಿ ಭಕ್ತರಿಂದ ಗೋವಿಂದ ನಾಮಸ್ಮರಣೆ ಮಾಡಲಾಯಿತು. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ದೇವರ ದರ್ಶನ ಪಡೆದರು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ