ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!

Public TV
1 Min Read

`ಯೂಟರ್ನ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮುಗೂತಿ ಸುಂದರಿ ಶ್ರದ್ಧಾ ಶ್ರೀನಾಥ್. `ಯೂಟರ್ನ್’ ಸಿನಿಮಾ ಕೊಟ್ಟ ಸಕ್ಸಸ್‌ನಿಂದ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೇ ಪರಭಾಷೆಯಲ್ಲೂ ವಿಭಿನ್ನ ರೀತಿಯ ಸಿನಿಮಾ ಮಾಡಿದ ಚೆಲುವೆ ಶ್ರದ್ಧಾ ಶ್ರೀನಾಥ್. ಸದ್ಯ ದಕ್ಷಿಣ ಭಾರತದಲ್ಲಿ ಸದ್ದು ಮಾಡ್ತಿರುವ ಹೇಮಾ ವರದಿ ಬಗ್ಗೆ ನಟ-ನಟಿಯರು ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಹೀಗಿರುವಾಗ ಈ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ (Shraddha Srinath) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ ಶ್ರದ್ಧಾ ಮೀಟೂ ಹಾಗೂ ಹೇಮಾ ವರದಿ ಬಗ್ಗೆ ಮೌನ ಮುರಿದಿದ್ದಾರೆ. `ನಾನು ಕೆಲಸ ಮಾಡುವ ಸ್ಥಳದಲ್ಲಿ ಅಂದ್ರೆ ಶೂಟಿಂಗ್ ಸೆಟ್‌ನಲ್ಲಿ ಮುಜುಗುರ ಪಡುವಂತಹ ಯಾವ ಸಂದರ್ಭ ಬಂದಿಲ್ಲ. ಆದರೆ ಕೆಲಸದ ನಂತರ ಅಂದರೆ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ಡ್ರೈವರ್ ನೋಡುವ ರೀತಿ, ಬೇರೆ ಜನರು ನೋಡುವ ರೀತಿ ಮುಜುಗುರ ತರಿಸುತ್ತೆ’ ಎಂದಿದ್ದಾರೆ. ಇದನ್ನೂ ಓದಿ: ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ 

ಜೊತೆಗೆ `ನಾನು ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಟೆಕ್ನಿಷಿಯನ್‌ಗಳಿಗೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಅಂತಹ ಸೌಕರ್ಯಗಳನ್ನ ಮಹಿಳಾ ಟೆಕ್ನಿಷಿಯನ್ಸ್ ಅಂದ್ರೆ ಹೇರ್‌ಸ್ಟೈಲಿಸ್ಟ್, ಮೇಕಪ್ ವಿಭಾಗದ ಮಹಿಳೆಯರಿಗೆ ಒದಗಿಸಿಕೊಡಬೇಕು’ ಎಂದು ಮಾತಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಅಂಗಳದಲ್ಲಿ ಕಾಂತಾರ ಬೆಡಗಿ ಸಖತ್ ಜಾಲಿ

ಒಟ್ಟಿನಲ್ಲಿ ಹೇಮಾ ಮಾದರಿಯ ಕಮಿಟಿ ಕನ್ನಡದಲ್ಲೂ ಬೇಕು ಅನ್ನೋದನ್ನ ಖಡಾಖಂಡಿತವಾಗಿ ಹೇಳದೇ, ಒಟ್ಟಾರೆ ಚಿತ್ರರಂಗದಲ್ಲಿ ಶೂಟಿಂಗ್ ಸೆಟ್‌ನಲ್ಲಿ ಮಹಿಳಾ ಟೆಕ್ನಿಷಿಯನ್ಸ್ ಎದುರಿಸುವಂತಹ ಮೂಲಭೂತ ಸೌಕರ್ಯದ ಬಗ್ಗೆ ಧನಿ ಎತ್ತಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್. ಇದನ್ನೂ ಓದಿ: ಮಾಲಾಶ್ರೀ ನಟನೆಯ ಹೊಸ ಸಿನಿಮಾಗೆ ಮುಹೂರ್ತ

Share This Article