ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

Public TV
4 Min Read

ನವದೆಹಲಿ: ದೆಹಲಿಯಲ್ಲಿ ನಡೆದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಸಿಕ್ಕಿದೆ. ಶ್ರದ್ಧಾ ದೇಹವನ್ನು ತುಂಡರಿದ್ದ ಸೈಕೋ ಪಾತಕಿ ಅಫ್ತಾಬ್ ಬರಿ ದೆಹಲಿಯ ಕಾಡುಗಳಲ್ಲಿ ಮಾತ್ರವಲ್ಲದೇ ಉತ್ತಾರಖಂಡನ ಡೆಹ್ರಾಡೂನ್ ನಲ್ಲೂ ಕೆಲವು ತುಂಡುಗಳನ್ನು ಎಸೆದು ಬಂದಿದ್ದಾನಂತೆ. ಈ ನಡುವೆ ಶ್ರದ್ಧಾ ಸ್ನೇಹಿತರು ಹಂಚಿಕೊಂಡ ಚಾಟ್‍ಗಳು ವೈರಲ್ ಆಗಿದ್ದು, ಅಫ್ತಾಬ್ ಶ್ರದ್ಧಾಳನ್ನು ವರ್ಷಗಳಿಂದ ಹಿಂಸಿಸುತ್ತಿದ್ದದ್ದು ಬಹಿರಂಗವಾಗಿದೆ.

ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಮೊಗೆದಷ್ಟು ಸ್ಪೋಟಕ ಮಾಹಿತಿಗಳು ಹೊರ ಬರುತ್ತಿದೆ. ದೆಹಲಿ ಪೊಲೀಸರ ವಿಚಾರಣೆಯಲ್ಲಿ ಸೈಕೊ ಪಾತಕಿ ಅಫ್ತಾಬ್ (Aftab Amin Poonawala) ಸ್ಫೋಟಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಪೊಲೀಸ್ ಕಸ್ಟಡಿ ವಿಸ್ತರಣೆ ಬಳಿಕ ಪೊಲೀಸರು ಅಫ್ತಾಬ್ ವಿಚಾರಣೆ ಮುಂದುವರಿಸಿದ್ದು, ವಿಚಾರಣೆ ವೇಳೆ ಮತ್ತೊಂದು ಸ್ಪೋಟಕ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

ಶ್ರದ್ಧಾಳ ದೇಹವನ್ನು 16 ಪೀಸ್ ಮಾಡಿದ್ದೆ ಎಂದು ಹೇಳಿಕೆ ತಿರುಚಿದ್ದ ಅಫ್ತಾಬ್, ಈಗ ದೆಹಲಿಯ ಮೆಹ್ರೋಲಿ ಕಾಡುಗಳು ಮಾತ್ರವಲ್ಲದೇ ಉತ್ತರಾಖಂಡ (Uttarakhand) ರಾಜಧಾನಿ ಡೆಹ್ರಾಡೂನ್‍ (Dehradun) ನಲ್ಲೂ ಕೆಲವು ತುಂಡುಗಳನ್ನು ಎಸೆದು ಬಂದಿರುವುದಾಗಿ ಹೇಳಿದ್ದಾನೆ. ಶ್ರದ್ಧಾ ದೇಹದ ಯಾವ ಭಾಗವನ್ನು ಎಸೆದು ಬಂದಿದ್ದ ಎನ್ನುವುದು ಇನ್ನೂ ಖಚಿತವಾಗಿಲ್ಲ, ಆದರೆ ಅಫ್ತಾಬ್ ನೀಡಿದ ಹೇಳಿಕೆಗೆ ಪೊಲೀಸರು ಅಚ್ಚರಿಗೊಂಡಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ತಲೆ ಬುರುಡೆ ಸುಟ್ಟು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ ಅಫ್ತಾಬ್

ಸ್ನೇಹಿತೆಗೆ ಶ್ರದ್ಧಾ ಮಾಡಿದ ಮೆಸೇಜ್ ವೈರಲ್: ತನಿಖೆಯ ಭಾಗವಾಗಿ ಪೊಲೀಸರು ಶ್ರದ್ಧಾಳ ಸ್ನೇಹಿತರು ಮತ್ತು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ (Company Manager) ಅನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ 2020ರಲ್ಲಿ ಶ್ರದ್ಧಾ ಮಾಡಿದ ಮೆಸೇಜ್ ಗಳನ್ನು ಅವರು ಹಂಚಿಕೊಂಡಿದ್ದಾರೆ. ಶ್ರದ್ಧಾ ತನ್ನ ಮ್ಯಾನೇಜರ್ ಕರಣ್ ಭಕ್ಕಿಗೆ 2020ರ ನವೆಂಬರ್ 26 ರಿಂದ 2020ರ ಡಿಸೆಂಬರ್ 3ರ ನಡುವೆ ಮಾಡಿದ ಮೆಸೇಜ್‍ನಲ್ಲಿ ಅಫ್ತಾಬ್ ತನ್ನನ್ನು ಕೊಂದುಬಿಡುವ ಬಗ್ಗೆ ಮಸೇಜ್ ಮಾಡಿದ್ದಾಳೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!

ಶ್ರದ್ಧಾ ಮೆಸೇಜ್‍ನಲ್ಲಿ ಮಾಡಿದ್ದೇನು..?: ಅಫ್ತಾಬ್ ನಿನ್ನೆ ಹೆಚ್ಚು ಹೊಡೆದಿದ್ದಾನೆ. ದೇಹಕ್ಕೆ ಹೆಚ್ಚು ನೋವಾಗಿದ್ದು ನಾನು ಕೆಲಸ ಮಾಡುವ ಪರಿಸ್ಥಿತಿಯಲ್ಲಿಲ್ಲ. ನನ್ನ ಬಿಪಿ (Blood Pressure) ಕೂಡ ಕಡಿಮೆಯಾಗಿದೆ. ಹಾಸಿಗೆಯಿಂದ ಎದ್ದೇಳುವ ಶಕ್ತಿಯೂ ನನ್ನಗಿಲ್ಲ. ಅವನು ಮನೆಯಿಂದ ಹೊರ ಹೋಗುವುದು ಕಾಯುತ್ತಿದ್ದೇನೆ. ನಾನು ಪೊಲೀಸ್‍ಗೆ ಕಂಪ್ಲೇಟ್ ಕೊಡಬೇಕು. ಮಹಿಳಾ ಸಂಘಟನೆಯನ್ನು ಸಂಪರ್ಕಿಸಬೇಕು, ನೀವೂ ನನಗೆ ಸಹಾಯ ಮಾಡಿ ಎಂದು ಮೆಸೇಜ್ (Message) ನಲ್ಲಿ ತಿಳಿಸಿದ್ದಾಳೆ. ಅಲ್ಲದೇ ತೀವ್ರ ಗಾಯಗೊಂಡ ಮುಖದ ಪೊಟೋವನ್ನು ತೆಗೆದು ಶ್ರದ್ಧಾ ಮ್ಯಾನೇಜರ್‍ಗೆ ರಜೆಗೆ ಮನವಿ ಮಾಡಿದ್ದಾರೆ. ಫೋಟೋ ನೋಡಿದ ಮ್ಯಾನೇಜರ್ ಕರಣ್ ಭಕ್ಕಿ ಸಹಾಯ ಮಾಡುವ ಭರವಸೆ ನೀಡಿದ್ದರು.

ಮತ್ತೊಂದು ಮೆಸೆಂಜರ್ (Messanger) ಚಾಟ್‍ನಲ್ಲಿ ಶ್ರದ್ಧಾ ಅಫ್ತಾಬ್ ಹೊಡೆದ ವಿಚಾರವನ್ನು ಸ್ನೇಹಿತೆಯಿಂದ ಮುಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಮೂಗಿನ ಮೇಲಿನ ಗಾಯ ಕಂಡು ಏನಾಯಿತು ಎಂದು ಕೇಳಿದ ಸ್ನೇಹಿತೆಗೆ ಮೆಟ್ಟಿಲು ಹತ್ತುವಾಗ ಜಾರಿ ಬಿದ್ದಿರುವುದಾಗಿ ಬಳಿಕ ಮುರಿದಿದೆ, ಕೆಲವು ವಾರದಲ್ಲಿ ಸರಿಯಾಗಲಿದೆ ಎಂದು ಶ್ರದ್ಧಾ ಹೇಳಿದ್ದಾಳೆ. ಈ ನಡುವೆ ಸ್ನೇಹಿತ ಲಕ್ಷ್ಮಣ್ ನಾಡಾರ್ ಗೆ ವ್ಯಾಟ್ಸಪ್ ಕಾಲ್ (Whatsap Call) ಮಾಡಿದ್ದ ಶ್ರದ್ಧಾ, ಅಫ್ತಾಬ್‍ನಿಂದ ರಕ್ಷಿಸುವಂತೆ ಕೇಳಿಕೊಂಡಿದ್ದಳು. ರಾತ್ರಿ ಆಫ್ತಾಬ್‍ನೊಂದಿಗೆ ಉಳಿದುಕೊಂಡರೆ ಅವನು ನನ್ನನ್ನು ಕೊಲ್ಲುತ್ತಾನೆ ಎಂದು ಹೇಳಿಕೊಂಡಿದ್ದಳು. ಇದನ್ನೂ ಓದಿ: ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

ಹಲ್ಲೆಯಿಂದ ಖಿನ್ನತೆಗೆ ಒಳಗಾಗಿದ್ದ ಶ್ರದ್ಧಾ: ಅಫ್ತಾಬ್‍ನ ನಿರಂತರ ಶೋಷಣೆಯಿಂದ ಶ್ರದ್ಧಾ ಖಿನ್ನತೆಗೆ ಒಳಗಾಗಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದಕ್ಕಾಗಿ ಮುಂಬೈ ಮೂಲದ ವೈದ್ಯ ಪ್ರಣವ್ ಕಬ್ರಾ (Pranav Kabra) ಅವರನ್ನು ಶ್ರದ್ಧಾ ಕಳೆದ ವರ್ಷ ಸಂಪರ್ಕಿಸಿದ್ದಳು. ಅವಳು ತನ್ನ ಸಿಟ್ಟು, ಖಿನ್ನತೆ ಬಗ್ಗೆ ಫೋನ್‍ನಲ್ಲಿ ಹೇಳಿಕೊಂಡಿದ್ದಳು. ನೇರವಾಗಿ ಸಂಪರ್ಕಿಸಲು ವೈದ್ಯರು ಸಲಹೆ ನೀಡಿದ ವೇಳೆ ಕೋವಿಡ್ ಕಾರಣದಿಂದ ನಿರಾಕರಿಸಿದರು ಎಂದು ವೈದ್ಯ ಪ್ರಣವ್ ಕಬ್ರಾ ಹೇಳಿಕೆ ದಾಖಲಿಸಿದ್ದಾರೆ.  ಇದನ್ನೂ ಓದಿ: ಶ್ರದ್ಧಾ ಕೇಸ್‌ನಂತೆಯೇ ಬಾಂಗ್ಲಾದಲ್ಲೂ ಭೀಕರ ಹತ್ಯೆ – ಹಿಂದೂ ಯುವತಿಯನ್ನು ಪೀಸ್ ಪೀಸ್ ಮಾಡಿದ ಹಂತಕ ಪ್ರೇಮಿ

ಪೊಲೀಸರಿಗೆ ಕೋರ್ಟ್ ಸೂಚನೆ: ಅಫ್ತಾಬ್ ಮಂಪರು ಪರೀಕ್ಷೆ ಸಂಬಂಧ ಕೋರ್ಟ್ (Court ಮಹತ್ವದ ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ತಜ್ಞರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲು ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಾಕೇತ್ ನ್ಯಾಯಾಲಯ ಆದೇಶ ನೀಡಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಅಫ್ತಾಬ್ ಪರಿಸ್ಥಿತಿ ಕಂಡಿ ಯಾವುದೇ ಥರ್ಡ್ ಡಿಗ್ರಿ ಟ್ರಿಂಟ್ಮೆಂಟ್ ನೀಡದಂತೆ ತನಿಖಾಧಿಕಾರಿಗೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

ತನಿಖೆಯ ಭಾಗವಾಗಿ ಹಿಮಾಚಲದಲ್ಲಿ ಪರಿಶೀಲನೆ ನಡೆಸುತ್ತಿದ್ದ ದೆಹಲಿ ಪೊಲೀಸರು, ಈಗ ಅಫ್ತಾಬ್ ಹೇಳಿಕೆಯ ಬಳಿಕ ಉತ್ತರಾಖಂಡಗೆ ಪ್ರಯಾಣ ಬೆಳೆಸಿದ್ದು ಡೆಹ್ರಾಡೂನ್‍ನಲ್ಲಿ ಶ್ರದ್ಧಾ ದೇಹದ ತುಂಡುಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ. ಈ ನಡುವೆ ಮಂಪರು ಪರೀಕ್ಷೆ ಬಳಿಕ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಗೆ ಬರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *