ಕಣ್ಮುಂದೆಯೇ ರಶ್ಮಿಕಾ ಇದ್ದರೂ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್

Public TV
2 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಗಣೇಶ ಹಬ್ಬದ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ಮನೆಗೆ ಆಮಂತ್ರಣವಿದ್ದು, ನಟಿ ಹಾಜರಿ ಹಾಕಿದ್ದರು. ಈ ವೇಳೆ, ರಶ್ಮಿಕಾ ಕಣ್ಮುಂದೆಯೇ ಇದ್ದರೂ ಮುಖ ತಿರುಗಿಸಿಕೊಂಡು ಶ್ರದ್ಧಾ ಕಪೂರ್ (Shraddha Kapoor) ಹೋಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಲ್ಲು, ಶಾರುಖ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ಮೆಚ್ಚಿಕೊಂಡ ಫ್ಯಾನ್ಸ್

ಮುಂಬೈನಲ್ಲಿ ಅಂಬಾನಿ ಕುಟುಂಬದವರು ಗಣಪತಿ ಪೂಜೆ ಆಯೋಜನೆ ಮಾಡಿದ್ದರು. ಸೆ.19ರಂದು ನಡೆದ ಈ ಸಮಾರಂಭದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಗೌರಿ ಖಾನ್, ಸುಹಾನಾ ಖಾನ್, ಆಲಿಯಾ ಭಟ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಅವರನ್ನು ನೋಡಿ ಶ್ರದ್ಧಾ ಕಪೂರ್ ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಶ್ಮಿಕಾ ಮಂದಣ್ಣ ಎದುರಲ್ಲೇ ಇದ್ದರೂ ಕೂಡ ಶ್ರದ್ಧಾ ಕಪೂರ್ ಅವರು ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಪರಸ್ಪರ ಹಾಯ್ ಹೇಳಿಲ್ಲ, ಸ್ಮೈಲ್ ಕೂಡ ಮಾಡಿಲ್ಲ. ಇಬ್ಬರು ಸ್ಟಾರ್ ನಟಿಯರ ನಡುವೆ ಕಿರಿಕ್ ಆಗಿದೆ ಎಂದು ಟಾಕ್ ಶುರುವಾಗಿದೆ.

ಕೆಲ ನೆಟ್ಟಿಗರು ಇದು ಆಟಿಟ್ಯೂಡ್ ಸಮಸ್ಯೆ ಎಂದರೆ, ಇನ್ನೂ ಕೆಲವರು ಇಬ್ಬರಿಗೂ ಒಬ್ಬರ ಪರಿಚಯ ಇನ್ನೋಬ್ಬರಿಗೆ ಇಲ್ಲದೇ ಇರಬಹುದು. ಅದಕ್ಕೆ ಶ್ರದ್ಧಾ, ರಶ್ಮಿಕಾರನ್ನ ಮಾತನಾಡಿಸದೇ ಮುಂದಕ್ಕೆ ಹೋಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ರಶ್ಮಿಕಾ ಮಂದಣ್ಣ, ಮುಕೇಶ್ ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಕನ್ನಡದ ಬ್ಯೂಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಲ್ಲೂ (Bollywood) ಡಿಮ್ಯಾಂಡ್ ಇದೆ. ಗುಡ್ ಬೈ, ‘ಮಿಷನ್ ಮಜ್ನು’ (Mission Majnu) ಸಿನಿಮಾ ಬಳಿಕ ರಣ್‌ಬೀರ್ ಕಪೂರ್ (Ranbir Kapoor) ನಟನೆಯ ಅನಿಮಲ್ ಇದೇ ಡಿಸೆಂಬರ್ 1ಕ್ಕೆ ರಿಲೀಸ್‌ಗೆ ರೆಡಿಯಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್